ಬೆಂಗಳೂರು: ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ನಿರ್ದೇಶನದಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುಂಡಿಮುಕ್ತ ರಸ್ತೆಗಳನ್ನಾಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಹೇಳಿದರು.
ಕೇಂದ್ರ ನಗರಪಾಲಿಕೆ ವ್ಯಾಪ್ತಿ ವಾರ್ಡ್ ವಾರು ರಸ್ತೆಗಳ ಪಟ್ಟಿ ಮಾಡಿಕೊಂಡು ಗುಂಡಿ ಬಿದ್ದ, ಹಾಳಾದ ರಸ್ತೆಗಳನ್ನು ಗುರುತಿಸಿ, ಡಾಂಬರೀಕರಣ, ಪ್ಯಾಚ್ ವರ್ಕ್, ಗುಂಡಿಗಳನ್ನು ಮುಚ್ಚುವ ಕುರಿತಂತೆ ನಿರಂತರವಾಗಿ ಸಭೆಗಳನ್ನು ನಡೆಸಿ, ಸ್ಥಳ ತಪಾಸಣೆ ಮಾಡಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲು ಇಂಜಿನೀಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೆ ಮೇರೆಗೆ ಹಾಳಾದ ರಸ್ತೆಗಳ ದುರಸ್ಥಿಪಡಿಸುವ ಕಾಮಗಾರಿ ಚುರುಕಿನಿಂದ ಸಾಗಿದ್ದು, ಗುಂಡಿಮುಕ್ತ ರಸ್ತೆಯನ್ನಾಗಿಸಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕಳೆದ 2 ದಿನಗಳಲ್ಲಿ ಸಿ.ವಿ. ರಾಮನ್ ನಗರ ವಿಭಾಗದ ಸುರಂಜನ್ ದಾಸ್ ರಸ್ತೆ, ಬಿಇಎಂಎಲ್ ಮುಖ್ಯ ರಸ್ತೆ, ಓಲ್ಡ್ ಮದ್ರಾಸ್, ರಿಚ್ಮಂಡ್ ರಸ್ತೆ, ಕಾಮರಾಜ್ ರಸ್ತೆ, ಹೊಸೂರು ರಸ್ತೆ, ಮಡಿವಾಳ, ವಿಕ್ಟೋರಿಯಾ ರಸ್ತೆ, ಜನರಲ್ ಕೆ.ಎಸ್. ತಿಮ್ಮಯ್ಯ ರಸ್ತೆ, ಎಂ.ಜಿ. ರಸ್ತೆ, ಚಿಕ್ಕಬಜಾರ ರಸ್ತೆ, ವಸಂತನಗರದ ಅರಮನೆ ರಸ್ತೆ, ಬಂಜಾರಾ ಭವನ ರಸ್ತೆ, ಕುಮಾರ ಪಾರ್ಕ್ ಪೂರ್ವ ರಸ್ತೆ, ಮೈಸೂರು ರಸ್ತೆ ಮೇಲು ಸೇತುವೆಯಲ್ಲಿ ಗುಂಡಿ ಮುಚ್ಚುವ, ಪ್ಯಾಚ್ ವರ್ಕ್, ಮೈಲ್ಮೈ ರಸ್ತೆ ಡಾಂಬರೀಕರಣ ಕಾಮಗಾರಿ ಕಾರ್ಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಮೋಟಾರೆಬಲ್ ರಸ್ತೆಗಳನ್ನಾಗಿ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ವಹಿಸಲಾದೆ ಎಂದು ಹೇಳಿದರು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿ 51 ರಸ್ತೆಗಳಲ್ಲಿ 48.90 ಕಿ.ಮೀ. ವ್ಯಾಪ್ತಿಯಲ್ಲಿ 701 ಗುಂಡಿಗಳು, 31,783 ಚದರ ಮೀ. ವಿಸ್ತೀರ್ಣದ ಪ್ಯಾಚ್ ವರ್ಕ್ ಮಾಡಲಾಗಿದೆ.ರಾಜೇಂದ್ರ ಚೋಳನ್ , ಕೇಂದ್ರ ನಗರ ಪಾಲಿಕೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.