ಅಪಘಾತ
–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಯಲಹಂಕ ಸಮೀಪದ ಬಾಗಲೂರು ಕ್ರಾಸ್‌ನ ಪಾಲನಹಳ್ಳಿ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ಬೈಕ್‌ನ ಹಿಂಬದಿಯ ಸವಾರರೊಬ್ಬರು ಮೃತಪಟ್ಟಿದ್ದಾರೆ.
ಕಿರಣ್ ವರ್ಮಾ (32) ಮೃತಪಟ್ಟವರು.
ಕೆ.ವಿ. ಸುಬ್ಬರಾಜು ಹಾಗೂ ಕಿರಣ್ ವರ್ಮಾ ಅವರು ಹುಣಸಮಾರನಹಳ್ಳಿ ಕಡೆಯಿಂದ ಆರ್‌ಟಿ ನಗರದ ಕಡೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಪಾಲನಹಳ್ಳಿ ಗೇಟ್ ಬಳಿ ರಸ್ತೆಗೆ ಅಡ್ಡಲಾಗಿ ಖಾಸಗಿ ಬಸ್‌ವೊಂದನ್ನು ನಿಲುಗಡೆ ಮಾಡಲಾಗಿತ್ತು. ಸ್ಕೂಟರ್ ನಿಯಂತ್ರಣ ತಪ್ಪಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರರಿಬ್ಬರು ರಸ್ತೆಯ ಮೇಲೆ ಬಿದ್ದಿದ್ದರು. ಅದೇ ವೇಳೆ ವೇಗವಾಗಿ ಬಂದ ಬೊಲೆರೊ ವಾಹನದ ಚಕ್ರಗಳು ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಕಿರಣ್ ವರ್ಮಾ ಅವರು ಸ್ಥಳದಲ್ಲೇ ಮೃತಪಟ್ಟರು. ಸುಬ್ಬರಾಜು ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಳಿಕ ಚಾಲಕ ಬೊಲೆರೊ ವಾಹನವನ್ನು ನಿಲುಗಡೆ ಮಾಡದೇ ಪರಾರಿ ಆಗಿದ್ದಾನೆ . ಖಾಸಗಿ ಬಸ್ ಹಾಗೂ ಬೊಲೆರೊ ವಾಹನದ ಚಾಲಕರ ವಿರುದ್ಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.