ADVERTISEMENT

ಬೆಂಗಳೂರು: ಬಿನ್ನಿಮಿಲ್ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 18:20 IST
Last Updated 25 ಡಿಸೆಂಬರ್ 2024, 18:20 IST
<div class="paragraphs"><p>ಸಾವು&nbsp;(ಪ್ರಾತಿನಿಧಿಕ ಚಿತ್ರ)</p></div>

ಸಾವು (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಮೆಜೆಸ್ಟಿಕ್ ಬಳಿಯ ಬಿನ್ನಿಮಿಲ್ ಬಳಿ ಬುಧವಾರ ರಾತ್ರಿ ರೈಲಿಗೆ ಸಿಲುಕಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಕೆ.ಪಿ.ಅಗ್ರಹಾರ ನಿವಾಸಿ ಶರತ್ ಮತ್ತು ಬಿನ್ನಿಮೀಲ್ ನಿವಾಸಿ ಸೂರ್ಯ ಮೃತರು.

ADVERTISEMENT

ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಬಿನ್ನಿಮೀಲ್ ಗೇಟ್ ಎರಡರ ಬಳಿ ಯುವಕರು ಹೋಗಿದ್ದು, ಅದೇ ವೇಳೆಗೆ ರೈಲು ಬಂದಿದೆ. ಮೈಸೂರಿನಿಂದ ಬೆಂಗಳೂರಿಗೆ‌ ಬರುತ್ತಿದ ರೈಲಿಗೆ ಇಬ್ಬರು ಯುವಕರು ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಕುರಿತು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಯಾವ ಕಾರಣಕ್ಕೆ ರಾತ್ರಿ ವೇಳೆ ರೈಲ್ವೆ ಗೇಟ್ ಬಳಿ ಯುವಕರು ಬಂದಿದ್ದರು ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.