ಬೆಂಗಳೂರು: ಜಲಮಂಡಳಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಂಡಿರುವ ಕಾರಣದಿಂದ ಫೆ.5, 6ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಮಂಡಳಿಯ ವತಿಯಿಂದ ಸಾರಕ್ಕಿ ಮಾರ್ಗವಾಗಿ ಬರುವ ನೀರಿನ ಪೈಪ್‌ಲೈನ್ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಅಡಿಯಲ್ಲಿ 1,200 ಮಿ.ಮೀ. ಮತ್ತು 700 ಮಿ.ಮೀ. ವ್ಯಾಸದ ಕೊಳವೆ ಮಾರ್ಗಗಳನ್ನು ಜೋಡಿಸುವ ಕಾರಣದಿಂದ ಕಾವೇರಿ ನೀರು ಸರಬರಾಜು ಯೋಜನೆಯ ಮೊದಲನೇ ಮತ್ತು ಎರಡನೇ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು ಫೆ.5ರ (ಗುರುವಾರ) ಬೆಳಿಗ್ಗೆ 6ರಿಂದ ಫೆ.6ರ (ಶುಕ್ರವಾರ) ಬೆಳಿಗ್ಗೆ 6ರವರೆಗೆ 24 ಗಂಟೆ ಕಾಲ ಸ್ಥಗಿತಗೊಳಿಸಲಾಗುತ್ತದೆ.
ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳುವಂತೆ ಅವರು ಕೋರಿದ್ದಾರೆ.
ಎಲ್ಲೆಲ್ಲಿ ವ್ಯತ್ಯಯ: ಮಾಗಡಿ ರಸ್ತೆ, ಕದಿರೇನಹಳ್ಳಿ, ಮಿನಜ್ ನಗರ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭ ನಗರ,ಆರ್.ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಚಂದ್ರಾನಗರ, ಮಾರುತಿ ಬಡಾವಣೆ, ವಿಠ್ಠಲ ನಗರ, ಇಸ್ರೊ ಬಡಾವಣೆ, ಟೀಚರ್ಸ್ ಕಾಲೊನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ.
ಇಲಿಯಾಸ್ ನಗರ, ಪೂರ್ಣ ಪ್ರಜ್ಞ ಲೇಔಟ್, ಉತ್ತರಹಳ್ಳಿ, ಕೆ.ಎಸ್.ಆರ್.ಟಿ.ಸಿ ಬಡಾವಣೆ, ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ, ಎ.ಜಿ.ಎಸ್ ಬಡಾವಣೆ, ಸಾರ್ವಭೌಮನಗರ ಸುಬ್ರಮಣ್ಯಪುರ, ಬಿ.ಹೆಚ್.ಸಿ.ಎಸ್ ಬಡಾವಣೆ, ಕೆನರಾ ಬ್ಯಾಂಕ್ ಕಾಲೊನಿ, ಕಾಕತೀಯ ನಗರ, ಸುದ್ದಗುಂಟೆ ಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್, ವೆಂಟೇಶ್ವರ ಲೇಔಟ್, ಬೃಂದಾವನ ಲೇಔಟ್, ಮಡಿವಾಳ, ಚಿನ್ನಮ್ಮ ಲೇಔಟ್, ಕೋರಮಂಗಲ 2,4,5,6,7 ಮತ್ತು 8 ನೇ ಬ್ಲಾಕ್, ಚಿಕ್ಕಆಡುಗೋಡಿ, ಸೆಂಟ್ ಜಾನ್ಸ್ ಆಸ್ಪತ್ರೆ, ರಾಜೇಂದ್ರ ನಗರ, ಆಡುಗೋಡಿ, ಜಾನ್ಸ್‌ನ್ ಮಾರ್ಕೆಟ್, ಸಿಎಲ್‌ಆರ್ ಭಾಗ.
ಶಾಂತಿನಗರ, ಎಂ.ಜಿ ರಸ್ತೆ, ರಿಚ್‌ಮಂಡ್ ಟೌನ್ , ನೀಲಸಂದ್ರ, ಅಶೋಕ ನಗರ, ಆಸ್ಟಿನ್ ಟೌನ್, ವಿವೇಕ್ ನಗರ, ಈಜಿಪುರ, ದೊಮ್ಮಲೂರು ಲೇಔಟ್, ದೊಮ್ಮಲೂರು ವಿಲೇಜ್, ಕೋಡಿಹಳ್ಳಿ, ಕಮಾಂಡೊ ಆಸ್ಪತ್ರೆ, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್ ಚಾಮರಾಜಪೇಟೆ, ಶ್ರೀನಗರ, ಬಿಎಸ್‌ಕೆ 1ನೇ ಹಂತ, ಅಶೋಕ್ ನಗರ ಪೈಪ್ ಲೈನ್ ರಸ್ತೆ, ಜಯನಗರ 4ನೇ ಮತ್ತು ʼಟಿʼ ಬ್ಲಾಕ್, ತಿಲಕ್ ನಗರ , ಮಾಧವನ್ ಪಾರ್ಕ್ , ಹೊಂಬೇಗೌಡ ನಗರ, ಲಕ್ಕಸಂದ್ರ, ಶಾಂತಿನಗರ ಲೇಔಟ್, ಜೆಕೆಪುರ, ಅಕ್ಕಿತಿಮ್ಮನ ಹಳ್ಳಿ, ಜಗಜೀವನರಾಮ್ ನಗರ, ರುದ್ರಪ್ಪ ಗಾರ್ಡನ್, ವಾಲ್ಮೀಕಿ ನಗರ, ಮಾವಳ್ಳಿ, ಶಂಕರಪುರ, ಕೆಂಪೇಗೌಡನಗರ, ಸುಧಾಮನಗರ, ಬನಗಿರಿ, ಜಯನಗರ, 6,7 ಮತ್ತು 8ನೇ ಬ್ಲಾಕ್, ಯಡಿಯೂರು, ಇಟ್ಟಮಡು, ಎಸ್‌ಬಿಎಂ ಕಾಲೊನಿ, ಹೊಸಕೆರೆಹಳ್ಳಿ, ಐಟಿಐ ಲೇಔಟ್, ಶ್ರೀನಿವಾಸ ನಗರ, ಡಿಸೋಜಾ ನಗರ, ಕೆರೆಕೋಡಿ, ಮುನೇಶ್ವರ ನಗರ, ಜೆ.ಪಿ.ನಗರ 1, 2 ಮತ್ತು 3ನೇ ಹಂತ, ಮಾರೇನಹಳ್ಳಿ, ಜಯನಗರ 5 ಮತ್ತು 9ನೇ ಬ್ಲಾಕ್, ಭೈರಸಂದ್ರ, ಎಲ್‌ಐಸಿ ಕಾಲೊನಿ, ಸಿದ್ದಾಪುರ, ವಿಲ್ಸ್‌ನ್ ಗಾರ್ಡನ್, ನಿಮಾನ್ಸ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೊಂದರೆಯಾಗಬಹುದು ಎಂದು ಜಲಮಂಡಳಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.