ಬೆಂಗಳೂರು: ವಿಧಾನಸೌಧದ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು.
ಚನ್ನರಾಯಪಟ್ಟಣದ ಸಂಜಯ್ ವಿಷ ಕುಡಿಯಲು ಯತ್ನಿಸಿದ ಯುವಕ.
‘ಮುಖಗವಸು ಧರಿಸಿ ಬುಧವಾರ ಸಂಜೆ ವಿಧಾನಸೌಧ ಎದುರು ಬಂದಿದ್ದ ಯುವಕ, ಸಣ್ಣ ಕವರ್‌ನಲ್ಲಿ ಬಾಟಲ್‌ವೊಂದನ್ನು ತಂದಿದ್ದ. ಅದರಲ್ಲಿ ವಿಷ ತಂದಿರುವುದಾಗಿ ಹೇಳಿದ್ದಾನೆ. ಕೆಲವು ದಾಖಲೆಗಳನ್ನೂ ಪ್ಲಾಸ್ಟಿಕ್ ಕವರ್‌ನಲ್ಲಿ ಇಟ್ಟುಕೊಂಡಿದ್ದ. ವಿಧಾನಸೌಧ ಎದುರು ಬಂದವನೇ ವಿಷ ಕುಡಿದು ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ. ತಕ್ಷಣವೇ ಪ್ಲಾಸ್ಟಿಕ್ ಕವರ್ ಕಸಿದುಕೊಂಡು ಯುವಕನನ್ನು ವಶಕ್ಕೆ ಪಡೆದುಕೊಳ್ಳಲಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಚನ್ನರಾಯಪಟ್ಟಣದ ಪೊಲೀಸರು ನನಗೆ ಮೋಸ ಮಾಡಿದ್ದಾರೆ. ನನಗೆ ನ್ಯಾಯ ಬೇಕು ಎಂದು ಹೇಳುತ್ತಾ ವಿಷಯ ಕುಡಿಯಲು ಯತ್ನಿಸಿದ. ವಶಕ್ಕೆ ಪಡೆದುಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಕೊಡಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.