
ವಾಲ್ಟರ್ ಡಿಸೋಜಾ ಅವರಿಗೆ ‘ಉತ್ಸವ ಗೌರವ’ ನೀಡಿ ಸನ್ಮಾನಿಸಲಾಯಿತು. ನೀಲಮ್ಮ, ಶೇಖ್ ಮಾಸ್ತರ್, ಸತೀಶ್ ತಿಪಟೂರು, ಕೆ.ವಿ. ನಾಗರಾಜಮೂರ್ತಿ, ದುನಿಯಾ ವಿಜಯ್, ಕೋಟಿಗಾನಹಳ್ಳಿ ರಾಮಯ್ಯ, ಜಡೇಶ್, ಶಶಿಧರ್ ಭಾರಿಘಾಟ್ ಇದ್ದರು
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಜಂಟಿಯಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರು ದಿನಗಳ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ಯು ಶುಕ್ರವಾರ ಸಂಪನ್ನವಾಯಿತು.
ಕೊನೆಯ ದಿನದ ಕಾರ್ಯಕ್ರಮದಲ್ಲಿ ರಂಗಕರ್ಮಿ ವಾಲ್ಟರ್ ಡಿಸೋಜಾ ಅವರಿಗೆ ‘ಉತ್ಸವ ಗೌರವ’ ನೀಡಿ ಸನ್ಮಾನಿ ಸಲಾಯಿತು. 40 ವರ್ಷ ಪೂರೈಸಿರುವ ಧಾರವಾಡದ ಅಭಿನಯ ಭಾರತಿ ತಂಡಕ್ಕೆ ‘ರಂಗ ಗೌರವ’ ಪ್ರದಾನ ಮಾಡಲಾಯಿತು.
‘ಚಿತ್ರಸಂತೆಯಂತೆ ರಂಗ ಪರಿಷೆ ನಿರಂತರ ನಡೆಯಬೇಕು’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ವೃತ್ತಿ ನಾಟಕ ಕಂಪನಿ ಮಾಲೀಕ ಶೇಖ್ ಮಾಸ್ತರ್, ‘ರಂಗಭೂಮಿಗೆ ತನ್ನದೇ ಆದ ತಾಕತ್ತಿದೆ. ವೃತ್ತಿ ರಂಗಭೂಮಿಯಿಂದ ಮೇರು ನಟರು ಹೊರಹೊಮ್ಮಿದ್ದಾರೆ. ರಾಜ್ಯದ ವಿವಿಧೆಡೆ ಈ ಪರಿಷೆ ನಡೆಯುವಂತಾ
ಗಬೇಕು’ ಎಂದರು.
ನಟ ‘ದುನಿಯಾ’ ವಿಜಯ್, ಕಲಾವಿದೆ ಸುಮತಿಶ್ರೀ, ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಚಲನಚಿತ್ರ ನಿರ್ದೇಶಕ ಜಡೇಶ್ ಹಂಪಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ರಿಜಿಸ್ಟ್ರಾರ್ ನೀಲಮ್ಮ ಪಾಲ್ಗೊಂಡಿದ್ದರು. ಮೈಸೂರು ರಂಗಾಯಣದ ಕಲಾವಿದರಿಂದ ‘ಅಂಬೇಡ್ಕರ್ ಕೊಲಾಜ್’, ಹಸ್ಮಿ ಥಿಯೇಟರ್ ಫೋರಂ ತಂಡದಿಂದ ‘ಮ್ಯಾಡ್ ಉಮೆನ್ ಆಫ್ ಶಯೋ’ ಮತ್ತು ಯುವ ರಂಗ ಸಂಭ್ರಮದಲ್ಲಿ ಅಭಿನಯ ತರಂಗದಿಂದ ‘ತಾರಾ’ ನಾಟಕ ಪ್ರದರ್ಶನಗೊಂಡಿತು.
ರಂಗಪಯಣ ಮತ್ತು ದೃಶ್ಯ ಕಾವ್ಯ ತಂಡವು ರಂಗಗೀತೆಗಳನ್ನು ಪ್ರಸ್ತುತ ಪಡಿಸಿದವು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಬಿಂಬ ರಾಘವೇಂದ್ರ ಮತ್ತು ತಂಡದಿಂದ ಹಮ್ಮಿಕೊಳ್ಳಲಾಗಿದ್ದ ವೀಣಾ ವಾದನ ನೆರೆದಿದ್ದವರನ್ನು ರಂಜಿಸಿತು.
‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ ಕವಿಗೋಷ್ಠಿ’ ನಡೆಯಿತು. ರಾಜಶೇಖರ್ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಮಹಾಮನೆ ಉಪನ್ಯಾಸ ನೀಡಿದರು. ಕಾಂತರಾಜಪುರ ಸುರೇಶ, ಕರಿಯಣ್ಣ ನಿಷಾದ, ಮಂಜುಳ ಬಿ.ವಿ, ಜಯಮಾಲಾ, ರೈಗಾ ಥಾಮಸ್, ವಿ. ಮಂಜುಳಾ ಪಾಟೀಲ, ಸುಮನಾ, ಅನಿತಾ ಚಿಕ್ಕಡಂಕ ಣಕಲ್, ಕೆ.ಎಸ್. ಯುಕ್ತಿ, ದೇವರಾಜ್ ಆರ್. ಮತ್ತು ಕಿರಣ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.