ADVERTISEMENT

ಬಯೋಕಾನ್‌ನ ಕಿರಣ್‌ ಮಜುಂದಾರ್‌ ಶಾಗೆ ಕೋವಿಡ್‌ ದೃಢ

ಪಿಟಿಐ
Published 18 ಆಗಸ್ಟ್ 2020, 3:06 IST
Last Updated 18 ಆಗಸ್ಟ್ 2020, 3:06 IST
ಬಯೋಕಾನ್‍ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ
ಬಯೋಕಾನ್‍ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ   

ಬೆಂಗಳೂರು: ಜೈವಿಕ ತಂತ್ರಜ್ಞಾನ ಕಂಪನಿ ಬಯೋಕಾನ್‍ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (67) ಅವರು ತಮಗೆ ಕೋವಿಡ್‌–19 ದೃಢಪಟ್ಟಿರುವುದಾಗಿ ಸೋಮವಾರ ರಾತ್ರಿ ಹೇಳಿದ್ದಾರೆ.

'ನನಗೆ ಪರೀಕ್ಷೆಯಲ್ಲಿ ಪಾಸಿಟಿವ್ ಬರುವ ಮೂಲಕ ಕೋವಿಡ್‌ ಪಟ್ಟಿಗೆ ಸೇರ್ಪಡೆಯಾಗಿದ್ದೇವೆ. ಸೋಂಕಿನ ಕೆಲವು ಲಕ್ಷಣಗಳು ಕಾಣಿಸಿಕೊಂಡಿವೆ' ಎಂದು ಕಿರಣ್ ಮಜುಂದಾರ್‌ ಟ್ವೀಟಿಸಿದ್ದಾರೆ.

ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ' ಈ ವಿಷಯ ತಿಳಿಯಲು ಬೇಸರವಾಗುತ್ತಿದೆ, ಶೀಘ್ರವೇ ಗುಣಮುಖರಾಗಿ ಮತ್ತು ಧೃಢಕಾಯರಾಗಿ ಮರಳಲು ಆಶಿಸುತ್ತೇವೆ. ಆರೋಗ್ಯದಿಂದಿರು ಗೆಳತಿ' ಎಂದಿದ್ದಾರೆ.

ADVERTISEMENT

ಆಗಸ್ಟ್‌ 17ರ ಸಂಜೆಯವರೆಗೂ ಕರ್ನಾಟಕದಲ್ಲಿ ಒಟ್ಟು 2,33,283 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 1,48,562 ಮಂದಿ ಗುಣಮುಖರಾಗಿದ್ದಾರೆ ಹಾಗೂ 4,062 ಮಂದಿ ಮೃತಪಟ್ಟಿದ್ದಾರೆ. ಜುಲೈನಿಂದ ಬೆಂಗಳೂರಿನಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸೋಮವಾರ ನಗರದಲ್ಲಿ 2,053 ಹೊಸ ಪ್ರಕರಣಗಳು ದಾಖಲಾಗಿದೆ ಹಾಗೂ 34,408 ಸಕ್ರಿಯ ಪ್ರಕರಣಗಳಿವೆ.

ಇತ್ತೀಚೆಗಷ್ಟೇ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಶಾಸಕರು, ಸಂಸದರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.