ಬೆಂಗಳೂರು: ಕೋವಿಡ್ ಹರಡುವುದನ್ನು ತಡೆಯುವುದಕ್ಕಾಗಿ ರಾಜ್ಯ ಸರ್ಕಾರವು ರಾತ್ರಿ 9ರ ನಂತರ ಕರ್ಫ್ಯೂ ವಿಧಿಸಿರುವುದರಿಂದ, ನಗರದಲ್ಲಿ ಮೆಟ್ರೊ ರೈಲು ಸೇವೆ ರಾತ್ರಿ 8ರವರೆಗೆ ಮಾತ್ರ ಲಭ್ಯ ಇರಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.
ಎರಡೂ ಮಾರ್ಗದ ಕೊನೆಯ ನಿಲ್ದಾಣಗಳಿಂದ ರಾತ್ರಿ 9 ಗಂಟೆಯ ಬದಲು ರಾತ್ರಿ 8 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಈ ಬದಲಾವಣೆ ಆ. 7ರಿಂದಲೇ ಜಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.
ಇದನ್ನೂ ಓದಿ... ರಾಜ್ಯದಾದ್ಯಂತ ನೈಟ್ ಕರ್ಫ್ಯೂ,ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ಡೌನ್: ಬೊಮ್ಮಾಯಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.