
ಬೆಂಗಳೂರು: ವಿಶ್ವ ವೇಗನ್ ದಿನದ ಅಂಗವಾಗಿ ಪ್ರಾಣಿಗಳ ಮೇಲೆ ನಡೆಯುವ ಹಿಂಸೆಯನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸಲು ಪ್ರಾಣಿ ಹಕ್ಕು ಹೋರಾಟಗಾರರು ಎಇಸಿಎಸ್ ಲೇಔಟ್‌ನಲ್ಲಿ ಅಭಿಯಾನ ನಡೆಸಿದರು.
ಬೆಂಗಳೂರು ಬ್ರಿಗೇಡ್ ಫಾರ್ ಅನಿಮಲ್ ಲಿಬರೇಷನ್ (ಬಿಬಿಎಎಲ್) ಜಾಗೃತಿ ಜಾಥಾವನ್ನು ನಗರದಲ್ಲಿ ಹಮ್ಮಿಕೊಂಡಿತ್ತು.
ಮಾಂಸ, ಹಾಲು, ಮೊಟ್ಟೆ, ಚರ್ಮ, ಜೇನುತುಪ್ಪ ಬಳಸುವುದು, ಪ್ರಾಣಿಗಳಿಂದ ಸೌಂದರ್ಯ ಉತ್ಪನ್ನಗಳನ್ನು ತಯಾರಿಸುವುದರ ಹಿಂದೆ ಕ್ರೌರ್ಯ ಅಡಗಿದೆ ಎಂದು ಪ್ರಾಣಿಹಕ್ಕು ಹೋರಾಟಗಾರರು ಪ್ರತಿಪಾದಿಸಿದರು.
ಕೋಳಿ, ಆಡು, ಮೀನು, ಹಂದಿಯನ್ನು ಆಹಾರಕ್ಕಾಗಿಯೇ ಸಾಕಲಾಗುತ್ತಿದೆ. ಅವುಗಳಿಗೆ ಆಗುವ ನೋವನ್ನು ನಾವು ನೋಡುತ್ತಿಲ್ಲ. ಆ ನೋವು ನಮ್ಮ ಮನಸ್ಸು, ಹೃದಯವನ್ನು ತಟ್ಟಬೇಕು ಎಂದು ಅಭಿಯಾನ ಆಯೋಜಕರಾದ ಮಹೇಶ್, ದಿಲೀಪ್ ತಿಳಿಸಿದರು.
‘ಪ್ರಾಣಿಗಳು ಮನುಷ್ಯರ ಬಳಕೆಗೆ ಸೃಷ್ಟಿಯಾದುದಲ್ಲ. ಆಹಾರ, ಉಡುಪು, ಮನರಂಜನೆಗೆ ಬಳಸಬಾರದು. ಅವುಗಳ ಚರ್ಮ ಅವುಗಳ ರಕ್ಷಣೆಗೇ ಇರುವುಂಥದ್ದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.