ADVERTISEMENT

ಕೊರೊನಾ: ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 7:13 IST
Last Updated 12 ಜೂನ್ 2020, 7:13 IST
ಚಿಕ್ಕಬಾಣಾವರ ಗ್ರಾಮದ ಗಣಪತಿ ನಗರವನ್ನು ಸೀಲ್‌ಡೌನ್‌
ಚಿಕ್ಕಬಾಣಾವರ ಗ್ರಾಮದ ಗಣಪತಿ ನಗರವನ್ನು ಸೀಲ್‌ಡೌನ್‌   

ಹೆಸರಘಟ್ಟ: ಚಿಕ್ಕಬಾಣಾವರ ಗ್ರಾಮದಲ್ಲಿ ವಾಸವಾಗಿದ್ದ ಉಡುಪಿ ಮೂಲದ ಸುಮಾರು 65 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

‘ತೀವ್ರ ಉಸಿರಾಟದ ತೊಂದರೆ ಎದುರಾಗಿದ್ದರಿಂದ ಬುಧವಾರ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಕ್ಕರೆ ಕಾಯಿಲೆಯಿಂದಲೂ ಅವರು ಬಳಲುತ್ತಿದ್ದರು’ ಎಂದುಚಿಕ್ಕಬಾಣಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಜಯರಾಂ ತಿಳಿಸಿದ್ದಾರೆ.

ಗಣಪತಿ ನಗರ ಸೀಲ್‍ಡೌನ್

ADVERTISEMENT

ಚಿಕ್ಕಬಾಣಾವರ ಗ್ರಾಮದ ಗಣಪತಿ ನಗರದಲ್ಲಿ ವೃದ್ಧೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಲಾಯಿತು.

ವೃದ್ಧೆಯು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಅವರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಕೂಡಲೇ ನಗರವನ್ನು ಸೀಲ್‌ಡೌನ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.