ADVERTISEMENT

ಮಾದರಿ ಪಡೆದೇ ಕೋವಿಡ್‌ ಪರೀಕ್ಷೆ: ಬಿಬಿಎಂಪಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 20:11 IST
Last Updated 5 ಅಕ್ಟೋಬರ್ 2020, 20:11 IST

ಬೆಂಗಳೂರು: ‘ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ಗಂಟಲ ದ್ರವದ ಮಾದರಿ ನೀಡಲು ಒಪ್ಪದ ಮೂವರಿಗೆ ಕೋವಿಡ್‌ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿ ನೀಡಲಾಗಿದೆ’ ಎಂಬ ಆರೋಪವನ್ನು ಬಿಬಿಎಂಪಿ ಅಲ್ಲಗಳೆದಿದೆ.

‘ಬಿಬಿಎಂಪಿ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವಿಲ್ಲ. ಈ ಆರೋಪ ಮಾಡಿರುವವರ ಗಂಟಲ ದ್ರವದ ಮಾದರಿಗಳು ನಮ್ಮ ಬಳಿ ಇವೆ. ಈ ಮೂವರು ತಮ್ಮ ಮೊಬೈಲ್‌ ಸಂಖ್ಯೆ ಹಾಗೂ ಒಟಿಪಿಯನ್ನೂ ನೀಡಿದ್ದಾರೆ’ ಎಂದು ದಕ್ಷಿಣ ವಲಯದ ಜಂಟಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

‘ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ನಿತ್ಯ 70ರಿಂದ 80 ಮಂದಿಯ ಗಂಟಲ ದ್ರವದ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಲಗುತ್ತಿದೆ. ಸೆ 24ರಂದು ಇಲ್ಲಿ 65 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ ಆರೋಪ ಮಾಡಿರುವ ಮೂವರ ಗಂಟಲ ದ್ರವದ ಮಾದರಿಗಳೂ ಸೇರಿವೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.