ಬೆಂಗಳೂರು: ನಗರದಲ್ಲಿ ಕೋವಿಡ್ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ತಿಂಗಳ ಏಳು ದಿನಗಳಲ್ಲಿ 19,568 ಮಂದಿ ಕೊರೊನಾ ಸೋಂಕಿತರಾಗಿರುವುದು ದೃಢಪಟ್ಟಿದೆ.
ಶುಕ್ರವಾರ 6,812 ಕೋವಿಡ್ ಪ್ರಕರಣಗಳು ಖಚಿತಪಟ್ಟಿವೆ. ಏಳು ತಿಂಗಳ ಅವಧಿಯಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ನಗರದಲ್ಲಿ ಈವರೆಗೆ ವರದಿಯಾದ ಪ್ರಕರಣಗಳ ಒಟ್ಟು ಸಂಖ್ಯೆ 12.83 ಲಕ್ಷ ದಾಟಿದೆ. ಸೋಂಕಿತರಾದವರಲ್ಲಿ ಈವರೆಗೆ 12.41 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಸದ್ಯ 25,370 ಸಕ್ರಿಯ ಪ್ರಕರಣಗಳಿವೆ.
ಸೋಂಕಿತರ ಸಂಖ್ಯೆ ಏರಿಕೆ ಕಂಡರೂ ಮರಣ ಪ್ರಮಾಣ ದರ ನಿಯಂತ್ರಣದಲ್ಲಿದೆ. ಏಳು ದಿನಗಳಲ್ಲಿ 17 ಮರಣ ಪ್ರಕರಣಗಳು ದೃಢಪಟ್ಟಿವೆ.
ಸರ್ಕಾರಿ ಕೋಟಾ: ಹಾಸಿಗೆ ಲಭ್ಯತೆ ವಿವರ (ಜ.07)
ವಿವಿಧ ಮಾದರಿ ಒಟ್ಟು ಹಾಸಿಗೆಗಳು: 1,836
ದಾಖಲಾದವರು: 166
ಬ್ಲಾಕ್ ಮಾಡಲಾಗಿರುವ ಹಾಸಿಗೆಗಳು: 03
ಲಭ್ಯವಿರುವವಿವಿಧ ಮಾದರಿ ಒಟ್ಟು ಹಾಸಿಗೆಗಳು: 1,667
ಸಾಮಾನ್ಯ ಹಾಸಿಗೆ ವಿವರ
ಒಟ್ಟು ಸಾಮಾನ್ಯ ಹಾಸಿಗೆಗಳು:684
ದಾಖಲಾದವರು: 73
ಬ್ಲಾಕ್ ಮಾಡಿರುವ ಹಾಸಿಗೆಗಳು: 02
ಲಭ್ಯವಿರುವ ಹಾಸಿಗೆಗಳು: 609
ಎಚ್ಡಿಯು ಹಾಸಿಗೆ ವಿವರ
ಒಟ್ಟು ಎಚ್ಡಿಯು ಹಾಸಿಗೆ:831
ದಾಖಲಾದವರು: 64
ಬ್ಲಾಕ್ ಮಾಡಿರುವ ಹಾಸಿಗೆ: 01
ಲಭ್ಯವಿರುವ ಹಾಸಿಗೆಗಳು: 766
ಐಸಿಯು ಹಾಸಿಗೆ ವಿವರ
ಒಟ್ಟು ಐಸಿಯು ಹಾಸಿಗೆಗಳು:114
ದಾಖಲಾದವರು: 20
ಬ್ಲಾಕ್ ಮಾಡಿರುವ ಹಾಸಿಗೆ: 00
ಲಭ್ಯವಿರುವ ಒಟ್ಟು ಹಾಸಿಗೆ: 94
ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ ವಿವರ
ಒಟ್ಟುವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ: 207
ದಾಖಲಾದವರು: 09
ಬ್ಲಾಕ್ ಮಾಡಿರುವ ಹಾಸಿಗೆ: 00
ಲಭ್ಯವಿರುವ ಹಾಸಿಗೆ: 198
*ಆಧಾರ: ಬಿಬಿಎಂಪಿ ಹಾಸಿಗೆ ಹಂಚಿಕೆ ಫೋರ್ಟಲ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.