ADVERTISEMENT

ಕಲಾವಿದ ಕಬ್ಬಡ್ಡಿ ರಾಮಚಂದ್ರ ನಿಧನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 11:10 IST
Last Updated 10 ಜುಲೈ 2021, 11:10 IST
ಕಬ್ಬಡ್ಡಿ ರಾಮಚಂದ್ರ
ಕಬ್ಬಡ್ಡಿ ರಾಮಚಂದ್ರ   

ಬೆಂಗಳೂರು: ರಂಗಭೂಮಿ ಕಲಾವಿದ ಹಾಗೂ ಸಂಘಟಕ ಕಬ್ಬಡ್ಡಿ ರಾಮಚಂದ್ರ (64) ಅವರು ಶನಿವಾರ ನಿಧನರಾದರು.

ಕೆಲ ದಿನಗಳ ಹಿಂದಷ್ಟೇ ಅವರಿಗೆ ಮಿದುಳಿನ ಗೆಡ್ಡೆ (ಬ್ರೈನ್ ಟ್ಯೂಮರ್) ತೆರವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇಸ್ರೊ ಬಡಾವಣೆಯ ವಸಂತಪುರದ ತಮ್ಮ ನಿವಾಸದಲ್ಲಿ ಬೆಳಿಗ್ಗೆ 10 ಗಂಟೆಗೆಅವರು ಮೃತಪಟ್ಟರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಾಮರಾಜಪೇಟೆಯ ಟಿ.ಆರ್.ಮಿಲ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.

ರಾಮಚಂದ್ರ ಅವರು ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ್ದರು. ಸಾಮಾಜಿಕ ಸಂದೇಶ ಸಾರುವ ನಾಟಕಗಳಲ್ಲಿ ಅವರು ಹೆಚ್ಚಾಗಿ ಅಭಿನಯಿಸಿದ್ದರು. ಕಲಾವಿದರ ಬಳಗ ಟ್ರಸ್ಟ್‌ನ ಸಂಸ್ಥಾಪನಾ ಅಧ್ಯಕ್ಷರಾಗಿದ್ದ ಅವರು, ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ವಿವಿಧ ಖಾಸಗಿ ಸಂಘ–ಸಂಸ್ಥೆಗಳ ಪ್ರಶಸ್ತಿಗಳು ಅವರಿಗೆ ಸಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.