ADVERTISEMENT

ಸಂವಿಧಾನ ಕುರಿತು ಚರ್ಚೆ: ಐವನ್ ಕಾಲೆಳೆದ ಎಸ್.ಆರ್. ಪಾಟೀಲ್‌, ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 10:28 IST
Last Updated 10 ಮಾರ್ಚ್ 2020, 10:28 IST
   

ಬೆಂಗಳೂರು: ಸಂವಿಧಾನದಆಶಯಗಳಿಗೆ ಇಂದು ಧಕ್ಕೆ ಬರುತ್ತಿದೆ ಎಂದು ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಹೇಳಿ, ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ವಾಗ್ಬಾಣ ಬಿಡಲು ಯತ್ನಿಸಿದರೂ, ಅವರದೇ ಪಕ್ಷದ ನಾಯಕ ಎಸ್ ಆರ್ ಪಾಟೀಲ ಮತ್ತು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ತಣ್ಣೀರು ಎರಚಿ, ಐವನ್ ಬಾಯಿ ಮುಚ್ಚಿಸಿದರು.

ಪ್ರಜಾವಾಣಿ ಮತ್ತು ಇಂಡಿಯಾ ಟುಡೆಗಳಲ್ಲಿ ಬಂದ ವರದಿಗಳನ್ನು ಉಲ್ಲೇಖಿಸಿ, ದೇಶದಲ್ಲಿ ಮೋದಿ ಸರ್ಕಾರ ಆಧಿಕಾರಕ್ಕೆಬಂದ ಬಳಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ ಎಂದರು.

ಆಗ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ಎತ್ತಿದರು. ಐವನ್ ಗೆ ನೈತಿಕ ಬೆಂಬಲ ಕೊಡುವ ಬದಲಿಗೆ ನಾಯಕರು ಇದುತಪ್ಪು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.