ADVERTISEMENT

ರಕ್ಷಣಾ ಸಚಿವರ ಭೇಟಿ ವೇಳೆ ಘಟನೆ: ಪೊಲೀಸ್‌ ಮೇಲೆ ಬೈಕ್ ಹತ್ತಿಸಿದ್ದ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 6:43 IST
Last Updated 19 ಫೆಬ್ರುವರಿ 2025, 6:43 IST
   

ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಒದಗಿಸಿದ್ದ ಬೆಂಗಾವಲು ಪಡೆ ಹೋಗುವಾಗ ಹೆಡ್ ಕಾನ್‌ಸ್ಟೆಬಲ್ ಮೇಲೆ ಬೈಕ್ ಹತ್ತಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಹಮದ್ ದಿಲ್ವಾರ್ ಹುಸೇನ್ ಬಂಧಿತ ಆರೋಪಿ. ಫೆ.9ರಂದು ರಾಜನಾಥ್ ಸಿಂಗ್ ಅವರು ನಗರಕ್ಕೆ ಭೇಟಿ ನೀಡಿದ್ದರು. ಅವರು ತೆರಳುತ್ತಿದ್ದ ಮಾರ್ಗದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು‌‌. 9ರಂದೇ ಮಧ್ಯಾಹ್ನ ಅನಿಲ್ ಕುಂಬ್ಳೆ ವೃತ್ತದಲ್ಲಿ ಅವರು ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಬೆಂಗಾವಲು ಪಡೆಗೆ ಆರೋಪಿ ಅಡ್ಡ ಬಂದಿದ್ದ. ಆತನನ್ನು ತಡೆಯಲು ಯತ್ನಿಸಿದ್ದ ಹೆಡ್ ಕಾನ್‌ಸ್ಟೆಬಲ್ ದಿನೇಶ್ ಮೇಲೆ ಬೈಕ್ ಹತ್ತಿಸಿದ್ದ. ಅವರು ಗಾಯಗೊಂಡಿದ್ದರು. ದಿನೇಶ್ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.