ADVERTISEMENT

ಬೆಂಗಳೂರು: ಕಣ್ಮನ ಸೂರೆಗೊಂಡ ’ವಿನ್ಯಾಸ ವೈಭವ’

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 16:12 IST
Last Updated 4 ಆಗಸ್ಟ್ 2025, 16:12 IST
‘ವಿನ್ಯಾಸ ವೈಭವ–2’ ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಪ್ರಜಾವಾಣಿ ಚಿತ್ರ 
‘ವಿನ್ಯಾಸ ವೈಭವ–2’ ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ    

ಬೆಂಗಳೂರು: ಝಗಮಗಿಸುವ ಬೆಳಕಿನ ಚಿತ್ತಾರ, ವೇದಿಕೆಯಲ್ಲಿ ವಿಶಿಷ್ಟ ಕಲಾತ್ಮಕತೆಯ ಉಡುಪುಗಳನ್ನು ಧರಿಸಿದ ವಿದ್ಯಾರ್ಥಿಗಳ ವಯ್ಯಾರ, ಸಭಿಕರ ಕರತಾಡನ...

ಇದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಫ್ಯಾಷನ್ ಮತ್ತು ಉಡುಪು ವಿನ್ಯಾಸ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ವಿನ್ಯಾಸ ವೈಭವ-2’ ಫ್ಯಾಷನ್ ಶೋ ಝಲಕ್‌.

ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟು 12 ತಂಡಗಳ 64 ವಿದ್ಯಾರ್ಥಿಗಳು ವಿವಿಧ ಪರಿಕಲ್ಪನೆಗಳ ವರ್ಣರಂಜಿತ ಉಡುಪು ವಿನ್ಯಾಸ ಪ್ರದರ್ಶಿಸಿದರು. ಆಕರ್ಷಕ ಹಾವಭಾವಗಳ ಬಿಂಕದ ನಡಿಗೆಯ ಮೂಲಕ ಸಭಿಕರನ್ನು ಬೆರಗುಗೊಳಿಸಿದರು. 

ADVERTISEMENT

ಯುವ ಪ್ರತಿಭೆಗಳು ಕರ್ನಾಟಕದ ಯಕ್ಷಗಾನ ವೇಷಧಾರಿಯ ನೃತ್ಯದೊಂದಿಗೆ ಆರಂಭವಾದ ಈ ದೃಶ್ಯ ವೈಭವದಲ್ಲಿ ಕೇರಳದ ಓಣಂ ಉಡುಗೆಯಿಂದ ಅಮೆರಿಕದ ಬುಡಕಟ್ಟು ಜನರ ವೇಷಭೂಷಣದವರೆಗೆ ವೈವಿಧ್ಯಮಯ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.

ಬಿಸಿಯು ಪ್ರಭಾರ ಕುಲಪತಿ ಪ್ರೊ.ಕೆ.ಆರ್. ಜಲಜಾ, ಕುಲಸಚಿವ ( ಮೌಲ್ಯಮಾಪನ) ಪ್ರೊ. ಬಿ.ರಮೇಶ್, ವಿತ್ತಾಧಿಕಾರಿ  ಎಂ.ವಿ.ವಿಜಯಲಕ್ಷ್ಮಿ, ವಿಭಾಗ ಮುಖ್ಯಸ್ಥರಾದ ಪ್ರೊ. ವಿ. ಆರ್. ದೇವರಾಜ್ ಸಮಾರಂಭದಲ್ಲಿ ಪಾಲ್ಗೊಂಡು ಸ್ಪರ್ಧಿಗಳನ್ನು ಅಭಿನಂದಿಸಿ ಬಹುಮಾನಗಳನ್ನು ವಿತರಿಸಿದರು.

ಮಿಸೆಸ್ ಏಷ್ಯಾ ಪ್ರತಿಭಾ ಸೌಂಷಿಮಠ್ ಮತ್ತು ವಿದ್ಯಾ ಫ್ಯಾಷನ್ ಅಕಾಡೆಮಿಯ ವಿದ್ಯಾ ವಿವೇಕ್ ತೀರ್ಪುಗಾರರಾಗಿ ಆಗಮಿಸಿದ್ದರು. 

ಬಹುಮಾನ ವಿಜೇತರು 

ವರ್ಷದ ವಿನ್ಯಾಸಕಿ-ಸುಷ್ಮಾ

ಅತ್ಯುತ್ತಮ ಕಲಾತ್ಮಕ ಉಡುಪು-ಚೈತ್ರಾ ಅತ್ಯುತ್ತಮ

ಕಸೂತಿ ಕೆಲಸ- ಸ್ಮೃತಿ ಅತ್ಯುತ್ತಮ ವರ್ಣ

ಸಂಯೋಜನೆ- ರೇಷ್ಮಾ ಅತ್ಯುತ್ತಮ

ಪರಿಕಲ್ಪನೆ-ಶರ್ಲಿ ಅತ್ಯುತ್ತಮ

ಸಮರ್ಪಣೆ- ಆರ್.ಪ್ರೀತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.