ADVERTISEMENT

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ‘ಎಲಿವೇಟೆಡ್ ವಾಕ್‌ ವೇ’

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 14:36 IST
Last Updated 25 ಆಗಸ್ಟ್ 2023, 14:36 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ‘ಎಲಿವೇಟೆಡ್ ವಾಕ್‌ ವೇ’.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿರುವ ‘ಎಲಿವೇಟೆಡ್ ವಾಕ್‌ ವೇ’.   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ‘ಎಲಿವೇಟೆಡ್ ವಾಕ್‌ ವೇ’ ನಿರ್ಮಿಸಲಾಗಿದೆ. ಪ್ರಯಾಣಿಕರ ಬಳಕೆಗೆ ಲಭ್ಯವಾಗಿದೆ.

ನೂತನ ವಾಕ್‌ವೇ ಟರ್ಮಿನಲ್ 1ರಿಂದ ಪಿ–4 ಪಾರ್ಕಿಂಗ್ ಅನ್ನು ಸಂಪರ್ಕಿಸುತ್ತದೆ. ಟರ್ಮಿನಲ್ 1 ಕಡೆಗೆ ಹಾಗೂ ಪಿ–4 ಪಾರ್ಕಿಂಗ್ ಕಡೆಗೆ ನಡೆದು ಸಾಗುವ ಪಾದಚಾರಿಗಳಿಗೆ ತಡೆರಹಿತ ಅನುಭವ ನೀಡಲು ಅಂದಾಜು 420 ಮೀಟರ್ ನಡಿಗೆ ಮಾರ್ಗ ವಿನ್ಯಾಸಗೊಳಿಸಲಾಗಿದೆ. ಇದು ಆಧುನಿಕ ವಿನ್ಯಾಸ ಒಳಗೊಂಡಿದ್ದು, ಪ್ರಯಾಣಿಕರು ಸುಲಭ ಹಾಗೂ ಆರಾಮದಾಯಕವಾದ ನಡಿಗೆ ಅನುಭವ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಇದು ಹಿರಿಯ ನಾಗರಿಕರ ಸ್ನೇಹಿಯಾಗಿದೆ’ ಎಂದೂ ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.