ADVERTISEMENT

ಉದ್ಯೋಗ ಹುಡುಕಬೇಡಿ ಸೃಷ್ಟಿಸಿ: ಸ್ವದೇಶಿ ಜಾಗರಣ ಮಂಚ್‌ನ ಜಗದೀಶ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 16:35 IST
Last Updated 8 ಜನವರಿ 2026, 16:35 IST
ಯುವ ಸಮಾವೇಶದಲ್ಲಿ ಶಾಸಕ ಎಸ್. ಮುನಿರಾಜು ಕರಪತ್ರ ನೀಡಿ ನೀಡಿದರು. ಸೌಂದರ್ಯ ಭರತ್ ಮತ್ತು ಜಗದೀಶ್ ಉಪಸ್ಥಿತರಿದ್ದರು
ಯುವ ಸಮಾವೇಶದಲ್ಲಿ ಶಾಸಕ ಎಸ್. ಮುನಿರಾಜು ಕರಪತ್ರ ನೀಡಿ ನೀಡಿದರು. ಸೌಂದರ್ಯ ಭರತ್ ಮತ್ತು ಜಗದೀಶ್ ಉಪಸ್ಥಿತರಿದ್ದರು   

ಪೀಣ್ಯ ದಾಸರಹಳ್ಳಿ: ‘ಕೃಷಿ, ಸಣ್ಣ ಕೈಗಾರಿಕೆ, ಸಣ್ಣ ವ್ಯಾಪಾರ ಮತ್ತು ಸ್ವಯಂ ಉದ್ಯೋಗಗಳಿಂದ ಶೇಕಡ 96ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ' ಎಂದು ಸ್ವದೇಶಿ ಜಾಗರಣ ಮಂಚ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಜಗದೀಶ್ ಮಾಹಿತಿ ನೀಡಿದರು.

ಸದೇಶಿ ಜಾಗರಣ ಮಂಚ್- ಕರ್ನಾಟಕ ವತಿಯಿಂದ ಆಯೋಜಿಸಲಾದ ಸ್ವದೇಶಿ 2ನೇ ದಿನದ ಮೇಳದಲ್ಲಿ 'ನಿರುದ್ಯೋಗ ಸಮಸ್ಯೆ ಮತ್ತು ಪರಿಹಾರ ಮಾರ್ಗಗಳು' ಎಂಬ ವಿಷಯ ಕುರಿತು ಯುವ ಸಮಾವೇಶದಲ್ಲಿ ಮಾತನಾಡಿದರು.

‘ಉದ್ಯೋಗ ಹುಡುಕಬೇಡಿ- ಸೃಷ್ಟಿಸಿ ಎಂಬುದು ನಮ್ಮ ಸಿದ್ಧಾಂತವಾಗಿದೆ. ದೇಶದ ಉತ್ಪಾದಕರಿಗೆ ಸೂಕ್ತ ತಂತ್ರಜ್ಞಾನದ ಸಂಶೋಧನೆ, ಉತ್ಪನ್ನಗಳಿಗೆ ದೇಶಿಯ ಮಾರುಕಟ್ಟೆ, ರಫ್ತು ಮಾಡುವ ವ್ಯವಸ್ಥೆ ಆಗಬೇಕು. ಯುವ ಜನತೆಯಲ್ಲಿ ಉದ್ಯಮಶೀಲತೆಯ ಮಾನಸಿಕತೆಯನ್ನು ಬೆಳೆಸುವಂತಹ ಶಿಕ್ಷಣ, ಕಾಲೇಜುಗಳಲ್ಲಿ ಉದ್ಯೋಗ ಸೃಷ್ಟಿಸುವ ಕೌಶಲ್ಯ ತರಬೇತಿ ಸಿಗಬೇಕು' ಎಂದರು.

ADVERTISEMENT

ಶಾಸಕ ಎಸ್. ಮುನಿರಾಜು ಮಾತನಾಡಿ,  ‘ಸ್ವದೇಶಿ ವಸ್ತುಗಳನ್ನು ಹೆಚ್ಚು ಬಳಸುವ ಮೂಲಕ ಇಲ್ಲಿನ ಉದ್ಯೋಗದ ಸಮಸ್ಯೆಯನ್ನು ನಿವಾರಿಸಬಹುದು. ಗಡಿಯಾರ, ತಂಪು ಪಾನೀಯ, ಲೇಖನಿ ಸಾಮಗ್ರಿ, ಪಾದರಕ್ಷೆ, ಅಡಿಗೆ ಎಣ್ಣೆ, ಮಸಾಲೆ ಪುಡಿ, ಹಾಲಿನ ಪುಡಿ, ಉಪ್ಪು, ಸಾಬೂನುಗಳು, ಪೌಡರ್, ತುಪ್ಪ, ಸಿದ್ಧ ಉಡುಪುಗಳು ಮುಂತಾದ ದೇಶಿ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸಬೇಕು' ಎಂದು ತಿಳಿಸಿದರು.

ಮಂಜುಳಾ ಭೀಮರಾವ್ ಅವರಿಂದ ಸೌಂದರ್ಯ ವರ್ಧಕ ವಸ್ತುಗಳ ತಯಾರಿಕಾ ಶಿಬಿರ ಮತ್ತು ಕುದ್ರೋಳಿ ಗಣೇಶ ಅವರಿಂದ 'ಮಸ್ತ್ ಮ್ಯಾಜಿಕ್ ಶೋ' ಅವರಿಂದ ನಡೆಯಿತು.

ಮೇಳದ ಸಂಘಟಕ ಸೌಂದರ್ಯ ಭರತ್, ಉದ್ಯಮಿ ರವಿ ಕುಲಾಲ್, ಸೌಂದರ್ಯ ಅಂಬಿಕ ಕಾಲೇಜಿನ ಪ್ರಾಶುಂಪಾಲೆ ಮೇಘನ, ಎಂ.ಎಸ್. ಪಿಯು ಕಾಲೇಜಿನ ಪ್ರಾಶುಂಪಾಲ ಮಲ್ಲಿಕಾರ್ಜುನ್, ಮೇಳದ ಸಂಯೋಜಕ ರವೀಂದ್ರ ಪ್ಯೆ, ಸಂಘಟಕ ಭರತ್ ಸೌಂದರ್ಯ , ಸಹ ಸಂಘಟಕ ಲಕ್ಷ್ಮಿ ವೆಂಕಟೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.