ADVERTISEMENT

ಬೆಂಗಳೂರು: ₹59.63 ಕೋಟಿ ಮೌಲ್ಯದ ಒತ್ತುವರಿ ತೆರವು

ನಗರ ಜಿಲ್ಲೆಯ ತಾಲ್ಲೂಕುಗಳ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 16:08 IST
Last Updated 15 ಮಾರ್ಚ್ 2025, 16:08 IST
<div class="paragraphs"><p>ಒತ್ತುವರಿ ತೆರವು</p></div>

ಒತ್ತುವರಿ ತೆರವು

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹59.63 ಕೋಟಿ ಮೌಲ್ಯದ ಒಟ್ಟು 19 ಎಕರೆ 7 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು.

ADVERTISEMENT

ನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿನ ಗೋಮಾಳ, ಗುಂಡುತೋಪು, ಸ್ಮಶಾನ ಮತ್ತು ಸರ್ಕಾರಿ ಖರಾಬ್ ಜಾಗಗಳಲ್ಲಿ ಒತ್ತುವರಿಯನ್ನು ತೆರವು ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.

ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಉತ್ತರಿ ಗ್ರಾಮದಲ್ಲಿ ಗೋಮಾಳದ ಒಂದು ಎಕರೆ, ಕೆಂಗೇರಿ ಹೋಬಳಿಯ ದೇವಗೆರೆ ಗ್ರಾಮದ ಗೋಮಾಳದ ಮೂರು ಎಕರೆ, ತಾವರೆಕೆರೆ ಹೋಬಳಿಯ ಗಂಗೇನಹಳ್ಳಿ ಗ್ರಾಮದ 'ಬ' ಖರಾಬ್‌ನ 0.14 ಗುಂಟೆ, ಬೇಗೂರು ಹೋಬಳಿಯ ಎಳೇನಹಳ್ಳಿ ಗ್ರಾಮದಲ್ಲಿನ ಸ್ಮಶಾನದ 0.01 ಗುಂಟೆಯನ್ಳು ವಶಕ್ಕೆ ಪಡೆಯಲಾಗಿದೆ.

ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ದ್ಯಾವಸಂದ್ರ ಗ್ರಾಮದ ಸ್ಮಶಾನದಲ್ಲಿನ 0.03 ಗುಂಟೆ, ಕಸಬಾ ಹೋಬಳಿಯ ಮೆಣಸಿಗನಹಳ್ಳಿ ಗ್ರಾಮದ ಗುಂಡುತೋಪಿನ 0.25 ಗುಂಟೆ, ಅತ್ತಿಬೆಲೆ ಹೋಬಳಿಯ ಜಿಗಳ ಮತ್ತು ಗೊಲ್ಲಹಳ್ಳಿ ಗ್ರಾಮಗಳ ಗುಂಡುತೋಪು ಮತ್ತು ಖರಾಬಿನ 1 ಎಕರೆ 11 ಗುಂಟೆ, ಸರ್ಜಾಪುರ ಹೋಬಳಿಯ ಸರ್ಜಾಪುರ ಮತ್ತು ತಿಗಳಚೌಡೇನಹಳ್ಳಿ ಗ್ರಾಮಗಳ ಕುಂಟೆ, ಕಾಲುವೆಗಳ 0.30 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

ಯಲಹಂಕ ತಾಲ್ಲೂಕಿನ ಯಲಹಂಕ ಹೋಬಳಿಯ ದೊಡ್ಡಬೆಟ್ಟಹಳ್ಳಿ ಗ್ರಾಮದ ಗೋಮಾಳದ 0.30 ಗುಂಟೆ, ಬೆಳ್ಳಹಳ್ಳಿ ಗ್ರಾಮದ ಗೋಮಾಳದಲ್ಲಿನ ಮೂರು ಎಕರೆ, ಹೆಸರುಘಟ್ಟ ಹೋಬಳಿಯ ವಿಶ್ವನಾಥಪುರ ಗ್ರಾಮದ ಗೋಮಾಳದಲ್ಲಿನ ಒಂದು ಎಕರೆ 30 ಗುಂಟೆ, ಹೆಸರುಘಟ್ಟ ಹೋಬಳಿಯ ಬ್ಯಾಲಕೆರೆ ಗ್ರಾಮದ ಸನ್ಮಾನದಲ್ಲಿನ 0.07 ಗುಂಟೆ, ಜಾಲ-3 ಹೋಬಳಿಯ ಮಹದೇವಕೊಡಿಗೆಹಳ್ಳಿ ಗ್ರಾಮದ ಖರಾಬ್‌ನಲ್ಲಿನ 0.09 ಗುಂಟೆಯನ್ನು ವಶಕ್ಕೆ ಪಡೆಯಲಾಗಿದೆ.

ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಮಲ್ಲಸಂದ್ರ, ನಗರೂರು ಮತ್ತು ಕದಲೂರು ಗ್ರಾಮಗಳ ಸರ್ಕಾರಿ ಖರಾಬು ಕಟ್ಟೆ, ಸ್ಮಶಾನ ಮತ್ತು ಗೋಮಾಳದಲ್ಲಿನ 2 ಎಕರೆ 24 ಗುಂಟೆ, ಯಶವಂತಪುರ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ  ಸರ್ಕಾರಿ ಖರಾಬ್‌ನಲ್ಲಿನ 0.06 ಗುಂಟೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಟ್ಟುಗೊಲ್ಲಹಳ್ಳಿಯ ಗೋಮಾಳದಲ್ಲಿ ಎರಡು ಎಕರೆ 15 ಗುಂಟೆ, ಬಿದರಹಳ್ಳಿ ಹೋಬಳಿಯ ಕನ್ನಮಂಗಲ ಗ್ರಾಮದ ಖರಾಬ್‌ನ 0.03 ಗುಂಟೆ, ವರ್ತೂರು ಹೋಬಳಿಯ ಸಿದ್ಧಾಪುರ ಗ್ರಾಮದ ಮುಫತ್ ಕಾವಲ್‌ನಲ್ಲಿನ 0.27 ಗುಂಟೆ ಒತ್ತುವರಿಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.