ADVERTISEMENT

ಬೆಂಗಳೂರು: ರಾಜ್ಯ ಸರ್ಕಾರದೊಂದಿಗೆ ಫ್ಲಿಪ್‍ಕಾರ್ಟ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 20:18 IST
Last Updated 11 ಜುಲೈ 2020, 20:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸ್ಥಳೀಯ ಕಲೆ, ಕುಶಲಕರ್ಮಿ ಹಾಗೂ ಕೈಮಗ್ಗ ವಲಯಗಳಿಗೆ ಉತ್ತೇಜನ ನೀಡುವ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸರ್ಕಾರದ ಎಂಎಸ್‍ಎಂಇ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯೊಂದಿಗೆ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‍ಕಾರ್ಟ್ ಒಪ್ಪಂದಕ್ಕೆ ಸಹಿ ಹಾಕಿದೆ.

'ಫ್ಲಿಪ್‍ಕಾರ್ಟ್ ಸಮರ್ಥ್' ಕಾರ್ಯಕ್ರಮದಡಿ ರಾಜ್ಯದ ಕುಶಲಕರ್ಮಿಗಳು, ನೇಕಾರರಿಗೆ ತಮ್ಮ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಿದೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ 'ಕಾವೇರಿ' ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ 'ಪ್ರಿಯದರ್ಶಿನಿ' ಕೈಮಗ್ಗದ ಉತ್ಪನ್ನಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರಲಿವೆ.

'ಈ ಒಪ್ಪಂದವು ಸ್ಥಳೀಯ ಉತ್ಪನ್ನಗಳನ್ನು ರಾಷ್ಟ್ರೀಯ ಗ್ರಾಹಕ ನೆಲೆಗೆ ಪರಿಚಯಿಸಲು ನೆರವಾಗಲಿದೆ. ಸ್ಥಳೀಯವಾಗಿ ತಯಾರಿಸಿದ ಉತ್ತಮ-ಗುಣಮಟ್ಟದ ಉತ್ಪನ್ನಗಳನ್ನು ಪ್ರದರ್ಶಿಸುವಾಗ ಬ್ರ್ಯಾಂಡಿಂಗ್, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಹಣಕಾಸು ನಿರ್ವಹಣೆಯ ಕೌಶಲಗಳಿಂದ ರಾಜ್ಯದ ಎಂಎಸ್‍ಎಂಇಗಳು ಪ್ರಯೋಜನ ಪಡೆಯಲಿವೆ' ಎಂದು ಎಂಎಸ್‍ಎಂಇ ಮತ್ತು ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ತಿಳಿಸಿದರು.

ADVERTISEMENT

ಫ್ಲಿಪ್‍ಕಾರ್ಟ್‍ನ ಮುಖ್ಯಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್, 'ಇದು ಸ್ವದೇಶಿ ವೇದಿಕೆಯಾಗಿ, ಸ್ಥಳೀಯ ವ್ಯವಹಾರಗಳನ್ನು ಹೆಚ್ಚಿಸಲು ಅಗತ್ಯ ವಾತಾವರಣ ಕಲ್ಪಿಸಲಿದೆ. ದೇಶದ ಗ್ರಾಮೀಣ ಮತ್ತು ಅವಕಾಶವಂಚಿತ ಸಮುದಾಯಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.