
ಪ್ರಜಾವಾಣಿ ವಾರ್ತೆ
ಆಹಾರ ಪ್ರದರ್ಶನ
ಬೆಂಗಳೂರು: ಸಿನರ್ಜಿ ಎಕ್ಸ್‌ಪೋಶರ್ಸ್ ಹಾಗೂ ಈವೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಆಹಾರ, ಪಾನೀಯ, ಹೋಟೆಲ್, ರೆಸ್ಟೋರೆಂಟ್ ಹಾಗೂ ಕೇಟರಿಂಗ್ ಕ್ಷೇತ್ರ, ಬೇಕರಿ, ಸಂಸ್ಕರಣೆ, ಪ್ಯಾಕೇಜಿಂಗ್ ಹಾಗೂ ಆತಿಥ್ಯ ವಲಯಗಳನ್ನು ಒಳಗೊಂಡ ಬಿ2ಬಿ ತಂತ್ರಜ್ಞಾನ, ಆಹಾರ ಉತ್ಪನ್ನಗಳ ಪ್ರದರ್ಶನವನ್ನು ಜ.20ರಂದ ಮೂರು ದಿನ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿದೆ.
ದೇಶ, ವಿದೇಶಗಳಿಂದ ಈ ವಲಯದ ಉದ್ಯಮಿಗಳು, ಪ್ರದರ್ಶಕರು ಭಾಗವಹಿಸುವರು. ಆಹಾರ ಮತ್ತು ಪಾನೀಯ ಸಂಸ್ಕರಣೆ, ಇಂಡಿಯಾ ಫುಡ್ ಪ್ಯಾಕ್, ಬೇಕರ್ಸ್ ತಂತ್ರಜ್ಞಾನ, ಇಂಡಿಯಾ ಡೇರಿ ಸಂಸ್ಕರಣೆ, ಆಹಾರ ಪಾನೀಯಗಳ ಪ್ರದರ್ಶನದ ವೇದಿಕೆಯಾಗಲಿದೆ ಎಂದು ಸಂಚಾಲಕ ಬ್ರಿಜೇಶ್ ಎಡ್ವರ್ಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.