ADVERTISEMENT

ಫ್ರಂಟ್‌ಲೈನ್‌ ಫಾರ್ಮಾ ಮಳಿಗೆಗಳಲ್ಲಿ ಮುಂದುವರಿದ ಶೋಧ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:37 IST
Last Updated 3 ಜುಲೈ 2019, 20:37 IST

ಬೆಂಗಳೂರು: ಷೇರುದಾರರಿಗೆ ಕೋಟ್ಯಂತರ ಹಣ ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಸಮೂಹ ಕಂಪನಿಗಳ ಮಾಲೀಕ ಮನ್ಸೂರ್‌ ಖಾನ್‌ ಅವರ ಒಡೆತನದಲ್ಲಿರುವ ಫ್ರಂಟ್‌ಲೈನ್‌ ಫಾರ್ಮಾ ಹೆಸರಿನ ಮಳಿಗೆಗಳಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬುಧವಾರ ಕೂಡಾ ಶೋಧ ಕಾರ್ಯ ಮುಂದುವರಿಸಿದರು.

ವಿಜಯನಗರ ಮತ್ತು ನೀಲಸಂದ್ರದಲ್ಲಿರುವ ಫ್ರಂಟ್‌ಲೈನ್‌ ಫಾರ್ಮಾದ ಮಳಿಗೆಗಳಿಂದ ಅಪಾರ ಮೊತ್ತದ ಔಷಧಿ ಮತ್ತು ವಿದ್ಯುನ್ಮಾನ ಉಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನೀಲಸಂದ್ರದಲ್ಲಿರುವ ಮಳಿಗೆಯಿಂದ ₹ 60 ಸಾವಿರ ನಗದು ಸೇರಿದಂತೆ ಒಟ್ಟು ₹ 40 ಲಕ್ಷ ಮೌಲ್ಯದ ಔಷಧಿ ಮತ್ತು ಇತರ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಮನ್ಸೂರ್‌ ಖಾನ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಡಿ. ಕುಮಾರ್‌ ಅವರನ್ನು ಅವರನ್ನೂ ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಕುಮಾರ್‌ ಅವರನ್ನು ನ್ಯಾಯಾಲಯ ಎಂಟು ದಿನಗಳ ಅವಧಿಗೆ ಪೊಲೀಸ್‌ ವಶಕ್ಕೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.