
ಪ್ರಜಾವಾಣಿ ವಾರ್ತೆ
ಬೆಂಗಳೂರು: ಕೆನರಾ ಬ್ಯಾಂಕ್ ರಿಲೀಫ್ ಮತ್ತು ವೆಲ್‌ಫೇರ್ ಸೊಸೈಟಿ–ಮಾತೃಛಾಯ ಸಂಸ್ಥೆಯಿಂದ ಆರೋಗ್ಯ ಸೇವಾ ಸಹಾಯಕರ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಐದನೇ ತರಗತಿ ಉತ್ತೀರ್ಣರಾದ 18 ರಿಂದ 45 ವರ್ಷದೊಳಗಿನ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಇರಲಿದೆ. ವೈದ್ಯಕೀಯ ಕ್ಷೇತ್ರದ ತಜ್ಞರಿಂದ 10 ದಿನ ತರಗತಿ ನಡೆಯಲಿದ್ದು, ಬೆಡ್ ಪ್ಯಾನ್ ಬಳಕೆ, ಆಹಾರ ನೀಡುವ ಕ್ರಮ, ಫಿಸಿಯೋ ಥೆರಪಿ (ಬೇಸಿಕ್)ಬಗ್ಗೆ ತರಬೇತಿ ನೀಡಲಾಗುತ್ತದೆ.
ವಿಳಾಸ: ಮಾತೃಛಾಯ ಸಂಸ್ಥೆ, 27ನೇ ತಿರುವು, ಸೇವಾಕ್ಷೇತ್ರ ಆಸ್ಪತ್ರೆ ಆವರಣ, ಬನಶಂಕರಿ ಎರಡನೇ ಹಂತ, ಬೆಂಗಳೂರು–560070,
ಮಾಹಿತಿಗೆ: 080–26713421.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.