ADVERTISEMENT

ಬೆಂಗಳೂರು: ಅಹಿಂಸೆ ಸಾರಿದ ಶಾಂತಿ ದೂತನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 15:29 IST
Last Updated 2 ಅಕ್ಟೋಬರ್ 2023, 15:29 IST
<div class="paragraphs"><p>‘ನಮ್ಮ ಮೆಟ್ರೊ’ ವತಿಯಿಂದ ನಾಡಪ್ರಭು ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕಲಾವಿದ ಅಕ್ಷಯ್‌ ಜಾಲಿಹಾಳ್‌ ಬಿಡಿಸಿದ ಗಾಂಧಿ ಚಿತ್ರ ಚಿತ್ತಾಕರ್ಷಕವಾಗಿತ್ತು.&nbsp; </p></div>

‘ನಮ್ಮ ಮೆಟ್ರೊ’ ವತಿಯಿಂದ ನಾಡಪ್ರಭು ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕಲಾವಿದ ಅಕ್ಷಯ್‌ ಜಾಲಿಹಾಳ್‌ ಬಿಡಿಸಿದ ಗಾಂಧಿ ಚಿತ್ರ ಚಿತ್ತಾಕರ್ಷಕವಾಗಿತ್ತು. 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಅಹಿಂಸೆ, ಅಸಹಕಾರಗಳನ್ನೇ ಪ್ರತಿಭಟನೆಯ ಅಸ್ತ್ರವನ್ನಾಗಿಸಿಕೊಂಡಿದ್ದ, ಸತ್ಯದ ಹಾದಿಯೇ ಸತ್ವದ ಹಾದಿ ಎಂದು ಸಾರಿದ್ದ ಶಾಂತಿ ದೂತ ಮಹಾತ್ಮ ಗಾಂಧಿ ಹಾಗೂ ಅವರ ಅನುಯಾಯಿಯಾಗಿದ್ದ ದೇಶದ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯನ್ನು ಸೋಮವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ADVERTISEMENT

ನೈರುತ್ಯ ರೈಲ್ವೆ:

ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಗಾಂಧೀಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಕುಸುಮಾ ಹರಿಪ್ರಸಾದ್, ನವಾಯದ್ ತಾಲಿಬ್, ಅಶುತೋಷ್ ಮಾಥೂರ್, ಅಧಿಕಾರಿಗಳು ಮತ್ತು ಸಫಾಯಿ ಕರ್ಮಚಾರಿಗಳು ಇದ್ದರು. ಕಲಾವಿದರು ಸ್ವಚ್ಛತೆಯ ವಿಷಯದ ಮೇಲೆ ಕಂಸಾಳೆ ಜನಪದ ನೃತ್ಯವನ್ನು ಪ್ರದರ್ಶಿಸಿದರು.

ಪಿಇಎಸ್‌ ವಿವಿ:

ಪಿವಿಎಸ್‌ ವಿಶ್ವವಿದ್ಯಾಲಯದಲ್ಲಿ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ ಶಾಸ್ತ್ರಿ ಅವರನ್ನು ಸ್ಮರಿಸಲಾಯಿತು. 

ಕುಲಾಧಿಪತಿ ಎಂ.ಆರ್‌. ದೊರೆಸ್ವಾಮಿಯವರ ಆಶಯದಂತೆ ಗಾಂಧೀಜಿ, ವಿಶ್ವೇಶ್ವರಯ್ಯ, ವಿವೇಕಾನಂದರ ಜೀವನ ಮೌಲ್ಯಗಳನ್ನು ಶೈಕ್ಷಣಿಕ ಪಠ್ಯದಲ್ಲಿ ಅಳವಡಿಸಲಾಗಿದೆ ಎಂದು ಕುಲಸಚಿವ ಕೆ.ಎಸ್‌. ಶ್ರೀಧರ್‌ ಹೇಳಿದರು. 

ಕ್ಯಾಂಪಸ್‌ ನಿರ್ದೇಶಕ ಎಂ.ವಿ. ಸತ್ಯನಾರಾಯಣ, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳಿದ್ದರು.

ವಿವೇಕಾನಂದ ಗೆಳೆಯರ ಬಳಗ:

ಗಿರಿನಗರದ ವಿವೇಕಾನಂದ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ 98 ವಯಸ್ಸಿನ ಡಿ.ಎನ್. ಸಂಪತ್ ಅವರನ್ನು ಗೌರವಿಸಲಾಯಿತು.

ಬಳಗದ ಅಧ್ಯಕ್ಷ ಚಿನ್ನಪ ರೆಡ್ಡಿ, ಉಪಾಧ್ಯಕ್ಷ ಶಿವರುದ್ರಪ್ಪ, ಕಾರ್ಯದರ್ಶಿ ವೆಂಕಟೇಶ್, ಮಾಜಿ ಅಧ್ಯಕ್ಷ ಶಿವು ಸುರಾಪುರ, ಶಿವಕುಮಾರ್, ರಂಗಕರ್ಮಿ ಜಿಪಿಒ ಚಂದ್ರು, ವಸಂತ್, ಸಾಹಿತಿ ನರಸಿಂಹಮೂರ್ತಿ ಇದ್ದರು.

ಬಿಬಿಎಂಪಿ:

ಕೆಎಸ್‌ಆರ್‌ ಬೆಂಗಳೂರು ರೈಲು ನಿಲ್ದಾಣದಲ್ಲಿ ಸ್ವಚ್ಛತೆಯ ಬಗ್ಗೆ ಕಂಸಾಳೆ ಜನಪದ ನೃತ್ಯ ಪ್ರದರ್ಶಿಸಿದ ತಂಡದೊಂದಿಗೆ ರೈಲ್ವೆ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು


ಎಂ.ಜಿ. ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಲಾರ್ಪಣೆ ಮಾಡಿದರು.

ಗಿರಿನಗರದ ವಿವೇಕಾನಂದ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ 98 ವಯಸ್ಸಿನ ಡಿ.ಎನ್. ಸಂಪತ್ ಅವರನ್ನು ಗೌರವಿಸಲಾಯಿತು.

ವಿಶೇಷ ಆಯುಕ್ತರಾದ ಹರೀಶ್ ಕುಮಾರ್, ರೆಡ್ಡಿ ಶಂಕರ ಬಾಬು, ಉಪ ಆಯುಕ್ತ ಮಂಜುನಾಥ್ ಸ್ವಾಮಿ, ಪೂರ್ವ ವಲಯ ಜಂಟಿ ಆಯುಕ್ತರಾದ ಪಲ್ಲವಿ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪ್ರತಿಭಾ, ಮಾಜಿ ಸಚಿವ ರಾಮಚಂದ್ರೇ ಗೌಡ ಇದ್ದರು.

ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪ್ರತಿಭಾ ಬಾಲಮಂದಿರ ಮಕ್ಕಳಿಂದ ಗೀತ ವಾಚನ, ದೀಪಿಕಾ ಶ್ರೀಕಾಂತ್ ಅವರಿಂದ ವೈಷ್ಣವ ಜನತೋ, ಹಡ್ಸನ್ ಚರ್ಚಿನ ಧರ್ಮಗುರು ರೆವೆರೆಂಡ್ ಆಲ್ಫ್ರೆಡ್ ಸುದರ್ಶನ್ ಮತ್ತು ತಂಡದಿಂದ ಬೈಬಲ್ ವಾಚನ, ಗುರುದ್ವಾರದ ಗುರುಸಿಂಗ್ ಸಭಾ ಮತ್ತು ತಂಡದಿಂದ ಗುರುಗ್ರಂಥ ವಾಚನ, ಮೌಲ್ವಿ ಹಫೀಜ್ ಶಾಬೀರ್ ಹುಸೇನ್ ಅವರಿಂದ ಕುರುಆನ್‌ ವಾಚನ ನಡೆಯಿತು.

ಬಿಎಂಟಿಸಿ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಉತ್ತಮ‌ ದರ್ಜೆಯ ತಿಂಡಿ ಮತ್ತು ಊಟವನ್ನು ಒದಗಿಸುವ ‘ಗಾಂಧಿ ಪಾಯಿಂಟ್’ ಕ್ಯಾಂಟಿನ್‌ಗೆ ಬಿಎಂಟಿಸಿ ಘಟಕ‌ 4ರಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
‘ಗಾಂಧಿ ಪಾಯಿಂಟ್’ ಕ್ಯಾಂಟಿನ್‌ಗೆ ಚಾಲನೆ
ಗಾಂಧಿ ಜಯಂತಿ ಪ್ರಯುಕ್ತ ಬಿಎಂಟಿಸಿ ಘಟಕ‌ 4 ರಲ್ಲಿ ಘಟಕದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಉತ್ತಮ‌ ದರ್ಜೆಯ ತಿಂಡಿ ಮತ್ತು ಊಟವನ್ನು ಒದಗಿಸುವ ‘ಗಾಂಧಿ ಪಾಯಿಂಟ್’  ಕ್ಯಾಂಟಿನ್‌ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಬಿಎಂಟಿಸಿ‌ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕ್ಯಾಂಟಿನ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿ ಕ್ಯಾಂಟಿನ್ ತೆರೆಯುವುದರಿಂದ ನಾಲ್ಕು ಸಾರಿಗೆ ಸಂಸ್ಥೆಗಳ‌ ಚಾಲನಾ ಸಿಬ್ಬಂದಿಗೆ ಅನುಕೂಲವಾಗಲಿದೆ. ಉತ್ತಮ ಗುಣಮಟ್ಟದ ಆಹಾರವು ರಿಯಾಯಿತಿ ದರದಲ್ಲಿ ದೊರಕಲಿದೆ. ಇದೇ ರೀತಿ ಇತರೆ ಘಟಕಗಳಲ್ಲಿಯೂ ಕ್ಯಾಂಟಿನ್ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಬಿಎಂಟಿಸಿ ದಕ್ಷಿಣ ವಿಭಾಗೀಯ ನಿಯಂತ್ರಣಾಧಿಕಾರಿ ಕೀರ್ತಿಚಂದ್ರ ಜಯನಗರ ಘಟಕ ವ್ಯವಸ್ಥಾಪಕ ರವೀಂದ್ರ ಸಿಬ್ಬಂದಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.