ADVERTISEMENT

ನೊಂದವರಿಗೆ ನ್ಯಾಯ ಕೊಡಿಸಿ, ನೀವೇ ಕಿತ್ತಾಡಬೇಡಿ: ಡಿ.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 23:30 IST
Last Updated 25 ಜೂನ್ 2025, 23:30 IST
ಕಾಂಗ್ರೆಸ್ ಪಕ್ಷ ಸೇರಿದ ಆಮ್ ಆದ್ಮಿ ಪಕ್ಷದ ಮುಖಂಡರನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಪಕ್ಷ ಸೇರಿದ ಆಮ್ ಆದ್ಮಿ ಪಕ್ಷದ ಮುಖಂಡರನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಪಕ್ಷಕ್ಕೆ ಬರಮಾಡಿಕೊಂಡರು.   

ರಾಜರಾಜೇಶ್ವರಿ ನಗರ: ‘ನಾನು ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ಅಧ್ಯಕ್ಷನಾಗಿರುವುದು, ಕೆಲವು ಭ್ರಷ್ಟ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿದೆ. ಆದರೆ, ರೈತರಿಗೆ ಖುಷಿಯಾಗಿದೆ. ನನಗಿಷ್ಟವಿಲ್ಲದಿದ್ದರೂ, ಈ ಭಾಗದ ಶಾಸಕರು, ಸಚಿವರು ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದ್ದಾರೆ’ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.

ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಪದಾಧಿಕಾರಿಗಳ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

‘ಕಾರ್ಯಕರ್ತರು ನೊಂದವರಿಗೆ ನ್ಯಾಯ ಕೊಡಿಸಬೇಕೇ ಹೊರತು, ನೀವು ನೀವೇ ಕಿತ್ತಾಡಬಾರದು. ನಿಮ್ಮ ನೋವು ಸಮಸ್ಯೆಗಳಿದ್ದರೆ, ನನ್ನ ಬಳಿ ಹೇಳಿ, ಬಗೆ ಹರಿಸುತ್ತೇನೆ’ ಎಂದರು. 

ADVERTISEMENT

ಕೆಪಿಸಿಸಿ ವಕ್ತಾರೆ ಎಚ್‌.ಕುಸುಮಾ ಮಾತನಾಡಿ, ‘ಕಾರ್ಯಕರ್ತರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸಿ. ಅದನ್ನು ಬಿಟ್ಟು, ಹೊಸ ಕಾಂಗ್ರೆಸ್, ಹಳೇ ಕಾಂಗ್ರೆಸ್ ಎಂದು ಮಾತನಾಡುವುದನ್ನು ನಿಲ್ಲಿಸಿ’ ಎಂದು ಸಲಹೆ ನೀಡಿದರು.

ಬೆಂಗಳೂರು ಪಶ್ಚಿಮಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಬಿಬಿಎಂಪಿ ಮಾಜಿ ಸದಸ್ಯರಾದ ಬಿ.ಆರ್.ನಂಜುಂಡಪ್ಪ, ಮಂಜುಳ ನಾರಾಯಣಸ್ವಾಮಿ, ವೇಲುನಾಯ್ಕರ್, ಎಚ್.ಎಸ್.ಸಿದ್ದೇಗೌಡ, ಆಶಾ ಸುರೇಶ್, ಮತ್ತಿತರರು ಹಾಜರಿದ್ದರು.

ಇದೇ ವೇಳೆ ಆರ್.ಆರ್.ನಗರ ವಿಧಾನಸಭಾಕ್ಷೇತ್ರದ ಆಮ್ ಆದ್ಮಿ ಪಕ್ಷದ ಸತೀಶ್ ಗೌಡ, ಇಂದ್ರಾಣಿ, ನವೀನ್, ಮಂಜುನಾಥ್, ಅಚ್ಚುತ್ ಗಾಣಿಗ,ವಿಜಯ್,  ಸೇರಿದಂತೆ ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.