ADVERTISEMENT

ಕ್ಯಾನ್ಸರ್‌ ರೋಗಿಗಳಿಗೆ ಕೇಶ ನೀಡಿದರು!

ಮೌಂಟ್‌ ಕಾರ್ಮೆಲ್‌ ಕಾಲೇಜು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 19:47 IST
Last Updated 8 ಆಗಸ್ಟ್ 2018, 19:47 IST
ತಲೆಗೂದಲನ್ನು ಸಂಪೂರ್ಣವಾಗಿ ದೇಣಿಗೆ ನೀಡಿದ ದ್ರುತಿ
ತಲೆಗೂದಲನ್ನು ಸಂಪೂರ್ಣವಾಗಿ ದೇಣಿಗೆ ನೀಡಿದ ದ್ರುತಿ   

ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಯಿಂದ ಕೂದಲು ಕಳೆದುಕೊಂಡವರಿಗೆ ಕೇಶರಾಶಿಯನ್ನೇ ನೀಡುವ ಮೂಲಕ ನಗರದ ಮೌಂಟ್‌ ಕಾರ್ಮೆಲ್‌ ಕಾಲೇಜಿನ ವಿದ್ಯಾರ್ಥಿನಿಯರು, ರೋಗಿಗಳ ಬಾಳಲ್ಲಿ ಹೊಂಗನಸುನ್ನು ಬಿತ್ತುವ ಕೆಲಸ ಮಾಡಿದ್ದಾರೆ.

ಕ್ಯಾನ್ಸರ್‌ ಎಂದಾಗಲೇ ಮಾನಸಿಕವಾಗಿ ಕುಗ್ಗಿಹೋಗುವ ರೋಗಿಗಳು, ಕಿಮೋಥೆರಪಿಯಲ್ಲಿ ಕೂದಲು ಕಳೆದುಕೊಂಡಾಗ ಸಂಪೂರ್ಣ ಖಿನ್ನತೆಗೆ ಒಳಗಾಗುತ್ತಾರೆ. ಅಂಥವರಿಗೆ ಮನೋಸ್ಥೈರ್ಯವನ್ನು ತುಂಬಿದ್ದಾರೆ ವಿದ್ಯಾರ್ಥಿನಿಯರು.

‘ಗಿಫ್ಟ್ ಹೇರ್, ಗಿಫ್ಟ್ ಕಾನ್ಫಿಡೆನ್ಸ್’ ಅನ್ನೋ ಹೆಸರಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಕೂದಲು ದಾನದ ಬಗ್ಗೆ ಅರಿವು ಮೂಡಿಸಲಾಯಿತು.ಕಾಲೇಜಿನ ನೂರಾರು ವಿದ್ಯಾರ್ಥಿಗಳು ತಮ್ಮ ಕೂದಲು ದಾನ ಮಾಡಿದರು.

ADVERTISEMENT

8ರಿಂದ 10 ಇಂಚು ಕೂದಲು ದಾನ ಮಾಡುವ ಹುಡುಗಿಯರ ನಡುವೆ ಸಂಪೂರ್ಣ ಕೂದಲು ನೀಡಿದ ದ್ರುತಿ ಎನ್ನುವ ವಿದ್ಯಾರ್ಥಿನಿ ವಿಶೇಷ ಎನಿಸಿದರು. ‘ಒಂದು ಉತ್ತಮ ಉದ್ದೇಶಕ್ಕಾಗಿ ನನ್ನ ಕೂದಲು ದಾನ ಮಾಡಿರುವುದು ಖುಷಿ ಇದೆ. ನನ್ನನ್ನು ನೋಡಿ ಇನ್ನಷ್ಟು ಜನ ಕೂದಲು ನೀಡುವಂತಾಗಬೇಕು’ ಎಂದು ದ್ರುತಿ ಹೇಳಿದರು.

ಚೆರಿಯನ್‌ ಫೌಂಡೇಶನ್ ಸಂಸ್ಥೆಗೆ ಆ ಕೂದಲುಗಳನ್ನು ನೀಡಲಾಯಿತು.ಈ ಸಂಸ್ಥೆ ಕೂದಲು ಕಳೆದು ಕೊಂಡಿರುವವರಿಗೆ ವಿಗ್‌ ವಿನ್ಯಾಸಪಡಿಸಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.