
ಸರ್ವಿಸ್ ರಸ್ತೆ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಎಚ್‌ಎಎಲ್ ಆಸ್ತಿಯನ್ನು ಬಳಸಿಕೊಂಡು ವಿಂಡ್ ಟನಲ್ ರಸ್ತೆಯ ಸಮೀಪ 1.43 ಕಿ.ಮೀ ಉದ್ದ ಸರ್ವಿಸ್ ರಸ್ತೆಯನ್ನು ರಾಜಕಾಲುವೆ ಬಫರ್ ವಲಯದಲ್ಲಿ ನಿರ್ಮಿಸಲು ಬಿ–ಸ್ಮೈಲ್ ನಿರ್ಧರಿಸಿದೆ.
ರಾಜಕಾಲುವೆ/ ಬಫರ್ ವಲಯದ ಸಂರಕ್ಷಣೆ, ಅಭಿವೃದ್ಧಿ ಜೊತೆಗೆ ಸರ್ವಿಸ್ ರಸ್ತೆಯನ್ನು ನಿರ್ಮಿಸಲು ₹19.98 ಕೋಟಿ ವೆಚ್ಚದ ಬಿ–ಸ್ಮೈಲ್ ಟೆಂಡರ್ ಆಹ್ವಾನಿಸಿದ್ದು, ಆರು ತಿಂಗಳಲ್ಲಿ ರಸ್ತೆ ನಿರ್ಮಿಸುವ ಗುರಿ ಹೊಂದಿದೆ.
ಚಲ್ಲಘಟ್ಟದ ಜೆಸಿಟಿ ರಸ್ತೆಯ ಸಮೀಪದ ರಾಜಕಾಲುವೆ ಬಫರ್ ವಲಯದಲ್ಲಿ ಆರಂಭವಾಗುವ ಸರ್ವಿಸ್ ರಸ್ತೆ, ಎಚ್‌ಎಎಲ್‌ನ ಕಾಂಪೌಂಡ್ ಸಮೀಪ ಹಾದುಹೋಗಿ, ಬೆಳ್ಳಂದೂರು ಕೆರೆ ದಡದಲ್ಲಿ ಸಾಗಲಿದೆ. ಈ ಸರ್ವಿಸ್ ರಸ್ತೆ ಕೆಂಪಾಪುರಕ್ಕೆ ಸಂಪರ್ಕ ಕಲ್ಪಿಸಲಿದೆ.
ರಾಜಕಾಲುವೆಗೆ ರೀಟೈನಿಂಗ್ ವಾಲ್, ಸೇತುವೆ ನಿರ್ಮಾಣ, ಒಳಚರಂಡಿ ಪೈಪ್ ಅಳವಡಿಕೆ, ಯುಟಿಲಿಟಿ ಚೇಂಬರ್‌ಗಳು, ಕೇಬಲ್ ಡಕ್ಟ್, ಎಚ್‌ಡಿಪಿಇ ಕೇಬಲ್ ಅಳವಡಿಸುವುದು ಸೇರಿದಂತೆ, ಬ್ಲ್ಯಾಕ್ ಟಾಪಿಂಗ್ ರಸ್ತೆಯನ್ನು ಪಾದಚಾರಿ ಮಾರ್ಗ, ಮಳೆ ನೀರು ಸಂಗ್ರಹ ವ್ಯವಸ್ಥೆಯೊಂದಿಗೆ ನಿರ್ಮಿಸಲು ಬಿ–ಸ್ಮೈಲ್ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.