ADVERTISEMENT

ಗಣೇಶ ಮೂರ್ತಿ ಮೆರವಣಿಗೆ, ವಿಸರ್ಜನೆ: ಸಂಚಾರ ಮಾರ್ಗ ಬದಲು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 15:28 IST
Last Updated 19 ಸೆಪ್ಟೆಂಬರ್ 2023, 15:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ), ಪುಲಕೇಶಿನಗರ, ಹಲಸೂರು ಹಾಗೂ ಸುತ್ತಮುತ್ತ ಸೆ. 22ರಂದು ಗಣೇಶ ಮೂರ್ತಿ ಬೃಹತ್ ಮೆರವಣಿಗೆಗಳು ನಡೆಯಲಿದ್ದು, ವಾಹನಗಳ ದಟ್ಟಣೆ ಉಂಟಾಗುವ ಸಾಧ್ಯತೆ. ಅಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಹಲಸೂರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಗಳು ಇವೆ. ದಟ್ಟಣೆ ಉಂಟಾಗುವುದರಿಂದ, ಮಾರ್ಗ ಬದಲಾವಣೆ ಮಾಡಲಾಗಿದೆ’ ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಸಂಚಾರ ನಿರ್ಬಂಧಿಸಿರುವ ರಸ್ತೆಗಳು:

  • ನಾಗವಾರ ಜಂಕ್ಷನ್‌ನಿಂದ ಪಾಟರಿ ವೃತ್ತ

  • ನೇತಾಜಿ ಜಂಕ್ಷನ್‌ನಿಂದ ಪಾಟರಿ ವೃತ್ತ–ಟ್ಯಾನರಿ ರಸ್ತೆ

  • ಕೆನ್ಸಿಂಗ್‌ಟನ್ ಕಡೆಯಿಂದ ಎಂ.ಇ.ಜಿ – ಹಲಸೂರು ಕೆರೆವರೆಗೆ

ಪರ್ಯಾಯ ಮಾರ್ಗ:

  • ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್‌ ಕಡೆಗೆ ಹೋಗುವವರು, ನಾಗವಾರ ಜಂಕ್ಷನ್‌ನಿಂದ ಹೆಣ್ಣೂರು ಜಂಕ್ಷನ್‌–ರಾಬರ್ಟ್‌ಸನ್‌ ರಸ್ತೆ ಜಂಕ್ಷನ್‌ ಮೂಲಕ ಸಂಚರಿಸಬಹುದು

  • ಶಿವಾಜಿನಗರದಿಂದ ನಾಗವಾರ್ ಜಂಕ್ಷನ್‌ ಹೋಗುವವರು, ಸ್ಪೆನ್ಸರ್ ರಸ್ತೆ–ಕೋಲ್ಸ್‌ ರಸ್ತೆ–ಹೆಣ್ಣೂರು ಮೂಲಕ ತೆರಳಬಹುದು

  • ಆರ್‌.ಟಿ.ನಗರದಿಂದ ಕಾವಲ್‌ಬೈರಸಂದ್ರ ಹೋಗುವವರು, ಪುಷ್ಪಾಂಜಲಿ ಚಿತ್ರಮಂದಿರ–ವೀರಣ್ಣ ಪಾಳ್ಯ ಜಂಕ್ಷನ್‌ ಮೂಲಕ ಸಾಗಬಹುದು

  • ನೇತಾಜಿ ಜಂಕ್ಷನ್‌ನಿಂದ ನಾಗವಾರ ಜಂಕ್ಷನ್‌ ಹೋಗುವವರು, ಮಾಸ್ಕ್‌ ಜಂಕ್ಷನ್–ಪಾಟರಿ ವೃತ್ತ– ಹೆಣ್ಣೂರು ರಸ್ತೆ ಜಂಕ್ಷನ್– ಲಿಂಗಾರಾಜಪುರ ಮೇಲ್ಸೇತುವೆ ಮೂಲಕ ತೆರಳಬಹುದು

ವಾಹನ ನಿಲುಗಡೆಗೆ ನಿರ್ಬಂಧ:

  • ಪಾಟರಿ ವೃತ್ತದಿಂದ ನಾಗವಾರ ಜಂಕ್ಷನ್, ಗೋವಿಂದಪುರ ಜಂಕ್ಷನ್, ಎಚ್‌.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿಂದ ನರೇಂದ್ರ ಟೆಂಟ್ ಜಂಕ್ಷನ್‌ವರೆಗೆ

  • ಪಾಟರಿ ವೃತ್ತದ ಎಂ.ಎಂ. ರಸ್ತೆಯಿಂದ ಲಾಜರ್ ರಸ್ತೆಯವರೆಗೆ

  • ಹಲಸೂರು ಕೆರೆ ಮುಖ್ಯದ್ವಾರ ಹಾಗೂ ಸುತ್ತಮುತ್ತಲ ರಸ್ತೆಗಳು (ಸೆ. 22 ಹಾಗೂ ಸೆ. 24ರಂದು ವಾಹನ ನಿಲುಗಡೆ ನಿರ್ಬಂಧ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.