ಶ್ರವಣ
ಬೆಂಗಳೂರು: ಸಂವಾದ್ ವಾಕ್ ಶ್ರವಣ ಸಂಸ್ಥೆ ಮತ್ತು ಬೆಂಗಳೂರಿನ ಅಲಿಮ್ಕೋ ಸಹಯೋಗದೊಂದಿಗೆ ಹಿಂದುಳಿದವರಿಗೆ ಉಚಿತ ಶ್ರವಣ ಸಾಧನ ವಿತರಣಾ ಶಿಬಿರವನ್ನು ಅ.3ರಿಂದ ಹಮ್ಮಿಕೊಂಡಿದೆ.
ಶ್ರವಣದೋಷವುಳ್ಳ ಸಮುದಾಯ ಸಬಲೀಕರಣಗೊಳಿಸುವ, ಶ್ರವಣ ಮತ್ತು ಮಾತಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಂಸ್ಥೆಯ ಟ್ರಸ್ಟಿ ರಾಧಿಕಾ ಪೂವಯ್ಯ ತಿಳಿಸಿದ್ದಾರೆ
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ #18, 1ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಆನಂದಗಿರಿ ಎಕ್ಸಟೆನ್ಶನ್, ಹೆಬ್ಬಾಳ ಪೊಲೀಸ್ ಠಾಣೆ ಹತ್ತಿರ, ಬೆಂಗಳೂರು-560024 ಸಂಪರ್ಕಿಸುವಂತೆ(ಮೊ:9663388623) ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.