ADVERTISEMENT

ಮುಂದುವರಿದ ಧಾರಾಕಾರ ಮಳೆ, ಹಲವೆಡೆ ಸಂಚಾರಕ್ಕೆ ತೊಂದರೆ

ಇನ್ನೆರಡು ದಿನ ವರುಣಧಾರೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 20:01 IST
Last Updated 20 ಆಗಸ್ಟ್ 2019, 20:01 IST
ಮಳೆಯಿಂದಾಗಿ ನಗರದ ವಿಲ್ಸನ್‌ ಗಾರ್ಡನ್‌ ಬಿಟಿಎಸ್‌ ರಸ್ತೆಯಲ್ಲಿ ನೀರು ನಿಂತ ಕಾರಣ ದ್ವಿಚಕ್ರ ಸವಾರರು ಪರದಾಡಿದರು
ಮಳೆಯಿಂದಾಗಿ ನಗರದ ವಿಲ್ಸನ್‌ ಗಾರ್ಡನ್‌ ಬಿಟಿಎಸ್‌ ರಸ್ತೆಯಲ್ಲಿ ನೀರು ನಿಂತ ಕಾರಣ ದ್ವಿಚಕ್ರ ಸವಾರರು ಪರದಾಡಿದರು   

ಬೆಂಗಳೂರು: ಕೇಂದ್ರ ಭಾಗವೂ ಸೇರಿದಂತೆ ನಗರದ ವಿವಿಧ ಕಡೆ ಮಂಗಳವಾರ ರಾತ್ರಿ ಕೂಡ ಧಾರಾಕಾರ ಮಳೆ ಸುರಿದಿದೆ.

ಅಷ್ಟೇ ಅಲ್ಲ, ಇನ್ನೂ ಎರಡು ದಿನ ಮೋಡ ಕವಿದ ವಾತಾವರಣದ ಜೊತೆಗೆ, ಕೆಲವು ಕಡೆಗಳಲ್ಲಿ ಭಾರಿ‌ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರ ಮತ್ತು ಹೊರವಲಯದಲ್ಲಿ ಸೋಮವಾರ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಸಂಜೆ ಆಗುತ್ತಿದ್ದಂತೆ ಮಳೆ ಸುರಿದಿದೆ.

ADVERTISEMENT

ಬೊಮ್ಮನಹಳ್ಳಿಯ ಗುಟ್ಟಿಗೆರೆ, ಬಸವನಗುಡಿ, ವಿದ್ಯಾಪೀಠ, ಅಂಜನಾಪುರ, ಮಹದೇವಪುರದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.

ಗಿರಿನಗರದಲ್ಲಿ ಬೃಹದಾಕಾರದ ಮರ ನೆಲಕ್ಕುರುಳಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಮರ ತೆರವುಗೊಳಿಸಿದರು. ಅಲ್ಲದೆ, ಗಿರಿನಗರದಲ್ಲಿ 162 ವಾರ್ಡ್‌ನ 11ನೇ ಅಡ್ಡರಸ್ತೆಯ ಮನೆಯೊಂದಕ್ಕೆ ನೀರು ನುಗ್ಗಿದೆ. ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.