ADVERTISEMENT

VIDEO | ಹೆಸರಘಟ್ಟ ಹುಲ್ಲುಗಾವಲು ಉಳಿಯುವುದು ಬೆಂಗಳೂರಿಗೆ ಎಷ್ಟು ಮುಖ್ಯ?

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 4:48 IST
Last Updated 15 ಡಿಸೆಂಬರ್ 2024, 4:48 IST

ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ನೇತೃತ್ವದ ವನ್ಯಜೀವಿ ಮಂಡಳಿಯು ಅನುಮೋದನೆ ನೀಡಿದೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಬಾಕಿ ಇದೆ. ದೇಶದಲ್ಲಿನ ಬೇರೆ ಯಾವುದೇ ಮಹಾನಗರದಲ್ಲಿ ಬೆಂಗಳೂರಿನಲ್ಲಿರುವಂತೆ ಈ ರೀತಿಯ ಹುಲ್ಲುಗಾವಲು ಪ್ರದೇಶ ಇಲ್ಲ. ನಗರಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ನಂತರ, ಶುದ್ಧಗಾಳಿ ಪೂರೈಸುವ ಎರಡನೇ ಅತಿ ದೊಡ್ಡ ಪ್ರದೇಶವಿದು. ಇಂತಹ ಪ್ರದೇಶದ ಉಳಿವು ಬೆಂಗಳೂರಿಗೆ ಎಷ್ಟು ಮುಖ್ಯ ಎಂಬುದರ ಕುರಿತ ವಿಸ್ತೃತ ವಿವರ ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.