ADVERTISEMENT

ದಾಸನಪುರ ಎಪಿಎಂಸಿಯಲ್ಲಿ ಕೊರೊನಾ ಮುನ್ನೆಚ್ಚರಿಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 20:47 IST
Last Updated 1 ಏಪ್ರಿಲ್ 2020, 20:47 IST
ಜನಜಂಗುಳಿಯಿಂದ ಕೂಡಿರುವ ದಾಸನಪುರ ಎಪಿಎಂಸಿ ಮಳಿಗೆಗಳು
ಜನಜಂಗುಳಿಯಿಂದ ಕೂಡಿರುವ ದಾಸನಪುರ ಎಪಿಎಂಸಿ ಮಳಿಗೆಗಳು   

ಹೆಸರಘಟ್ಟ: ದಾಸನಪುರದ ಎಪಿಎಂಸಿಯ ತರಕಾರಿ ಪ್ರಾಂಗಣವು ಜನಜಂಗುಳಿಯಿಂದ ಗಿಜಿಗುಡುತ್ತಿದೆ. ವ್ಯಾಪಾರಸ್ಥರು ಕೊರೊನಾದ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಪ್ರತಿದಿನ ಬೆಳಿಗ್ಗೆ ಐದು ಘಂಟೆಗೆ ತರಕಾರಿ ಹರಾಜು ಪ್ರಾರಂಭಗೊಳ್ಳುತ್ತದೆ. ತರಕಾರಿ ಖರೀದಿಗೆ ಬರುವ ವ್ಯಾಪಾರಸ್ಥರು ಅಂತರ ಕಾಯ್ದುಗೊಳ್ಳುವುದಿಲ್ಲ. ಸಮೀಪದಲ್ಲಿ ನಿಂತು ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ ಮತ್ತಹಳ್ಳಿ ಗ್ರಾಮದ ನಿವಾಸಿ ಕೃಷ್ಣಮೂರ್ತಿ.

‘ಕೆಲವರಷ್ಟೇ ಮುಖಗವಸುಗಳನ್ನು ಹಾಕುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ವರ್ತಕರು ಮತ್ತು ವ್ಯಾಪಾರಸ್ಥರು ಮುಖಗವಸು ಹಾಕುತ್ತಿಲ್ಲ. ಎಪಿಎಂಸಿ ಅಧಿಕಾರಿಗಳು ಸ್ಥಳದಲ್ಲಿ ಇದ್ದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಅವರು ಹೇಳುತ್ತಾರೆ.

ADVERTISEMENT

‘ಪ್ರತಿದಿನ 500ರಿಂದ 600 ವರ್ತಕರು ಮತ್ತು ವ್ಯಾಪಾರಸ್ಥರು ಒಂದು ಕಡೆ ಸೇರುತ್ತಿದ್ದಾರೆ. ಆದರೆ, ಕೊರೊನಾ ವೈರಸ್ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈ ಗೊಳ್ಳುತ್ತಿಲ್ಲ. ಇದರಿಂದ ಸುತ್ತ ಮುತ್ತಲಿನ ಗ್ರಾಮಸ್ಥರಲ್ಲಿ ಕೊರೊನಾ ವೈರಸ್ ಬಗ್ಗೆ ಭೀತಿ ಉಂಟಾಗುತ್ತಿದೆ’ ಎಂದು ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.