ADVERTISEMENT

ಮೇ 3ಕ್ಕೆ ‘ಶುಭಸ್ಯ ಶೀಘ್ರಂ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 15:42 IST
Last Updated 25 ಏಪ್ರಿಲ್ 2025, 15:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದ ಬಸವನಗುಡಿಯ ಗಾಯನ ಸಮಾಜದಲ್ಲಿ ಮೇ 3 ಮತ್ತು 4ರಂದು ‘ಶುಭಸ್ಯ ಶೀಘ್ರಂ’ ಹೆಸರಿನಲ್ಲಿ ಹಿಂದೂ ವಧು–ವರಾನ್ವೇಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫ್ಯೂಸ್ ನೆಟವರ್ಕ್ ಸಿಇಒ ಜಿ.ಸ್ವಾಮೀಜಿ ಹೇಳಿದರು.

ಹಿಂದೂ ಧರ್ಮದ ವಧು–ವರರಿಗೆ ಸೂಕ್ತ ಸಂಗಾತಿ ಆಯ್ಕೆಗೆ ಅನುವು ಮಾಡಿಕೊಡಲಾಗುವುದು. ಅಂತರ್ಜಾತಿ ವಿವಾಹದ ಆಸಕ್ತಿ ಹೊಂದಿರುವವರಿಗೆ ವಿಶೇಷ ವಿಭಾಗ ತೆರೆಯಲಾಗಿದೆ. ಕುಟುಂಬದವರು ಹಾಗೂ ಹಿರಿಯರ ಸಮ್ಮುಖದಲ್ಲಿ ವಧು–ವರರು ನೇರ ಸಂವಾದ ನಡೆಸಿ, ಸಂಗಾತಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪ್ರವೇಶ ಶುಲ್ಕ ವಧುವಿಗೆ ₹1,000 ಹಾಗೂ ವರನಿಗೆ ₹2,000 ನಿಗದಿ ಪಡಿಸಲಾಗಿದೆ. ಕೃಷಿಕ ಕುಟುಂಬದ ವಧುಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತ ಪ್ರವೇಶ ಇದೆ. ಮೇ 1ರೊಳಗೆ ಹೆಸರು ನೋಂದಾಯಿಸಬಹುದು. ಮಾಹಿತಿಗೆ 9108853377 ಸಂಪರ್ಕಿಸಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.