ADVERTISEMENT

ವಸತಿಗೃಹದ ಕೊಠಡಿಯಲ್ಲಿ ಕುದುರೆ ರೇಸ್‌ ಬೆಟ್ಟಿಂಗ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 15:29 IST
Last Updated 30 ಜನವರಿ 2021, 15:29 IST

ಬೆಂಗಳೂರು: ಶೇಷಾದ್ರಿಪುರ ಬಳಿಯ ನೆಹರೂ ನಗರದಲ್ಲಿರುವ ವಸತಿಗೃಹವೊಂದರ ಕೊಠಡಿಯಲ್ಲಿ ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಎಸ್‌. ಮಿಥುನ್ ಮಡಿ (33), ವಿದ್ಯಾರಣ್ಯಪುರದ ವಿ. ರಘು (47) ಹಾಗೂ ಕಾಮಾಕ್ಷಿಪಾಳ್ಯ ಕಾವೇರಿಪುರದ ಕೆ. ಶಿವರಾಜು (30) ಬಂಧಿತರು. ಅವರಿಂದ ₹ 5 ಲಕ್ಷ ನಗದು ಹಾಗೂ ಐದು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ತಮ್ಮದೇ ಜಾಲ ಸೃಷ್ಟಿಸಿಕೊಂಡಿದ್ದ ಆರೋಪಿಗಳು, ಆ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು. ಕುರುರೆ ರೇಸ್ ನಡೆಯುವ ದಿನದಂದು ಸಾರ್ವಜನಿಕರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಬೆಟ್ಟಿಂಗ್‌ನಲ್ಲಿ ಗೆದ್ದವರಿಗೆ ಖುದ್ದು ಹಣ ಕೊಟ್ಟು ಬರುತ್ತಿದ್ದರು. ಆರಂಭದಲ್ಲಿ ಕೆಲವರು ಮಾತ್ರ ಅವರ ಬಳಿ ಬೆಟ್ಟಿಂಗ್ ಕಟ್ಟುತ್ತಿದ್ದರು. ಇತ್ತೀಚೆಗೆ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಹೆಚ್ಚಾಗಿತ್ತು’ ಎಂದು ಅವರು ತಿಳಿಸಿದರು.

ADVERTISEMENT

‘ವಸತಿಗೃಹದಲ್ಲಿ ಆರೋಪಿಗಳು ಇರುವ ಮಾಹಿತಿ ಲಭ್ಯವಾಗಿತ್ತು. ದಾಳಿ ಮಾಡಿ ಹಣದ ಸಮೇತ ಆರೋಪಿಗಳನ್ನು ಸೆರೆ ಹಿಡಿಯಲಾಯಿತು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.