ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳ ತಲೆ ಮೇಲೆ ಇಟ್ಟ ಕರ್ಪೂರ ಕೂದಲನ್ನು ಸುಡಲಿಲ್ಲ. ಕಣ್ಣಿನ ಎದುರಿಗೆ ಇಟ್ಟ ನಿಂಬೆಹಣ್ಣು ಮಾಯವಾಯಿತು. ಖಾಲಿ ಕೊಡದಲ್ಲಿ ನೀರು ಬರುತ್ತಿತ್ತು. ಹೀಗೆ ಪವಾಡಗಳ ಮೇಲೆ ಪವಾಡ ಮಾಡುತ್ತಿದ್ದರೆ ಗ್ರಾಮಸ್ಥರು ಮೂಕ ವಿಸ್ಮಯದಿಂದ ನೋಡುತ್ತಿದ್ದರು.
ಇದು ಕಾಮಾಕ್ಷಿಪುರ ಗ್ರಾಮದ, ಮಾರಸಂದ್ರದ ಪಿಕೆಬಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್ಎಸ್‌ಎಸ್ ಶಿಬಿರದಲ್ಲಿ ಹುಲಿಕಲ್ ನಟರಾಜ್ ಪವಾಡಗಳ ಹಿಂದಿನ ರಹಸ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ದೃಶ್ಯ.
‘ಮಾಟ, ಮಂತ್ರಗಳಿಂದ ಮನುಷ್ಯರನ್ನು ದುರ್ಬಲರಾಗಿ ಮಾಡುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದದ್ದು. ಯಾವ ಮಾಟ ಮಂತ್ರಗಳು ಮನುಷ್ಯನನ್ನು ಏನೂ ಮಾಡಲಾರವು. ಡೊಂಗಿಕೋರರು ನಿಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತಾರೆ. ಅದನ್ನು ನಂಬಬೇಡಿ. ಮಾನಸಿಕವಾಗಿ ನಾವು ಗಟ್ಟಿಯಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
‘ಸುಲಭವಾಗಿ ಮಾಡಬಹುದಾದ ತಂತ್ರಗಳನ್ನು ಬಳಸಿ ಅದಕ್ಕೆ ಪವಾಡದ ಹೆಸರಿಡುತ್ತಾರೆ. ಇದನ್ನು ಜನರು ನಂಬಬಾರದು’ ಎಂದು ಉದಾಹರಣೆ ಸಹಿತ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.