ADVERTISEMENT

ಗಾಲಿ ಕುರ್ಚಿ ಇಲ್ಲದೇ ಬಂದಿದ್ದೇನೆ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:42 IST
Last Updated 16 ಏಪ್ರಿಲ್ 2025, 15:42 IST
ಅಭಯಾಂಜನೇಯಸ್ವಾಮಿ ದೇವಾಲಯದ ಕುಂಭಾಭಿಷೇಕ ಪ್ರಯುಕ್ತ ಬುಧವಾರ ನಡೆದ ಭಕ್ತಸಮಾಗಮ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸಭಿಕರಿಗೆ ವಂದಿಸಿದರು. ಪ್ರಜಾವಾಣಿ ಚಿತ್ರ.
ಅಭಯಾಂಜನೇಯಸ್ವಾಮಿ ದೇವಾಲಯದ ಕುಂಭಾಭಿಷೇಕ ಪ್ರಯುಕ್ತ ಬುಧವಾರ ನಡೆದ ಭಕ್ತಸಮಾಗಮ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸಭಿಕರಿಗೆ ವಂದಿಸಿದರು. ಪ್ರಜಾವಾಣಿ ಚಿತ್ರ.   

ಬೆಂಗಳೂರು: ‘ನನ್ನ ಆರೋಗ್ಯದ ಪರಿಸ್ಥಿತಿಯನ್ನು ನಾನು ಎಲ್ಲರ ಮುಂದೆ ಹೇಳಲು ಹೋಗುವುದಿಲ್ಲ. ಆದರೂ ಗಾಲಿ ಕುರ್ಚಿ ಇಲ್ಲದೇ ನಡೆದುಕೊಂಡು ಬಂದಿದ್ದೇನೆ. ನಿಂತುಕೊಂಡು ದೇವರಿಗೆ ಮಂಗಳಾರತಿ ಮಾಡಿದ್ದೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಅಭಯಾಂಜನೇಯ ಸ್ವಾಮಿ, ಪ್ರಸನ್ನ ಗಣಪತಿ ಮತ್ತು ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇನ್ಸುಲಿನ್‌ ಸಂಪರ್ಕ ತಪ್ಪಿಸಿ ಬಂದಿದ್ದೇನೆ. ಥೆರಪಿ ಮಾಡಿಸಿಕೊಂಡಿದ್ದರಿಂದ ನಡೆದುಕೊಂಡು ಬರಲು ಸಾಧ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ಸ್ವಾಮೀಜಿ ನೀವು ಯಾವ ವಿಚಾರಕ್ಕೆ ಕೈ ಹಾಕಿದ್ದೀರಿ? ನನಗೆ ಎಲ್ಲ ವಿಷಯ ಗೊತ್ತಿದೆ. ಅವತ್ತು ನಾನು ಬರಲಿಲ್ಲ. ಕುಮಾರಸ್ವಾಮಿ ಬಂದಿದ್ದರು. ಅವರು ಹೆಚ್ಚು ಮಾತನಾಡಿಲ್ಲ ಎಂಬುದೂ ಗೊತ್ತಿದೆ. ಮನಸ್ಸಿನ ಸಂಕಲ್ಪ, ನಿಮ್ಮಲ್ಲಿರುವ ಕಳಕಳಿ ಅದು. ಪ್ರಧಾನ ದೇವತೆ ಆಂಜನೇಯನನ್ನು ಪ್ರತಿಷ್ಠಾಪನೆ ಮಾಡಿದ್ದೀರಿ. ಯಾವ ಕೆಲಸ ಆಗುವುದಿಲ್ಲ ಎಂಬುದಿದೆಯೋ ಆ ಕೆಲಸ ಆಗುತ್ತದೆ ಎಂಬ ನಂಬಿಕೆ ಇದೆ’ ಎಂದು ದೇವೇಗೌಡರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.