ADVERTISEMENT

‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ‘ನಕ್ಷತ್ರ’ ಮಿಂಚು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 11:24 IST
Last Updated 27 ಅಕ್ಟೋಬರ್ 2019, 11:24 IST
ನಕ್ಷತ್ರ
ನಕ್ಷತ್ರ   

ಬೆಂಗಳೂರು:ಅಪಾರ ಬುದ್ಧಿಮತ್ತೆ, ಚಾಣಾಕ್ಷತನ ಹೊಂದಿರುವ ಬೆಂಗಳೂರಿನ ಬಾಲ ಪ್ರತಿಭೆ ನಕ್ಷತ್ರ ಅರುಣ್‌ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ. ಒಂದು ವರ್ಷ ಎರಡು ತಿಂಗಳು ವಯಸ್ಸಿನ ನಕ್ಷತ್ರ ‘ಆಡ್ರಾಯ್ಟ್‌ ಟಾಡ್ಲರ್‌’ ಶೀರ್ಷಿಕೆಯಡಿ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ.

ಪ್ರಾಣಿ, ಹಣ್ಣು, ತರಕಾರಿಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಗುರುತಿಸುತ್ತಾಳೆ. ಅಲ್ಲದೆ, ಹಿಂದೂ ದೇವತೆಗಳನ್ನು ಹಾಗೂ ದೇಹದ ಭಾಗಗಳನ್ನು ಸರಿಯಾಗಿ ಗುರುತಿಸುತ್ತಾಳೆ.

70ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವ ಈ ಪುಟಾಣಿ, ಇದಕ್ಕಾಗಿ ಒಂದೆರಡು ಸೆಕೆಂಡ್‌ ಅಷ್ಟೇ ಯೋಚಿಸುತ್ತಾಳೆ. ತಂದೆ ಅರುಣ್‌ ಎಂಜಿನಿಯರ್‌, ತಾಯಿ ಲಕ್ಷ್ಮಿ ಉಪನ್ಯಾಸಕಿ. ಕೇರಳ ಮೂಲದ ಇವರು ನಗರದಲ್ಲಿ ನೆಲೆಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.