ADVERTISEMENT

ಇಂಟೆಕ್ಸ್‌ ಫಾರ್ಮಿಂಗ್– 2026: ಜ. 21ರಿಂದ ನೂತನ ಆವಿಷ್ಕಾರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 15:38 IST
Last Updated 8 ಜನವರಿ 2026, 15:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಭಾರತೀಯ ಯಂತ್ರೋಪಕರಣ ತಯಾರಕರ ಸಂಘವು(ಐಎಂಟಿಎಂಎ) ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ(ಬಿಐಇಸಿ) ಇದೇ 21ರಿಂದ ಐದು ದಿನಗಳ ಕಾಲ ಇಂಟೆಕ್ಸ್‌ ಫಾರ್ಮಿಂಗ್– 2026 ಲೋಹದ ವಸ್ತುಗಳ ಉತ್ಪಾದನಾ ತಂತ್ರಜ್ಞಾನದಲ್ಲಿನ ನೂತನ ಆವಿಷ್ಕಾರಗಳ ಪ್ರದರ್ಶನ ಆಯೋಜಿಸಿದೆ.

ADVERTISEMENT

 ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಗುರುಪ್ರಸಾದ್ ಕೆ.ಆರ್, ‍‘ಜರ್ಮನಿ, ಇಟಲಿ, ಜಪಾನ್, ತೈವಾನ್ ಸೇರಿದಂತೆ 24 ದೇಶಗಳ 714 ಸಂಸ್ಥೆಗಳು, ಯಂತ್ರೋಪಕರಣ ತಯಾರಿಕೆಯಲ್ಲಿನ ನೂತನ ಆವಿಷ್ಕಾರಗಳನ್ನು ಪ್ರದರ್ಶಿಸಲಿವೆ. ವಾಹನದ ಉಪಕರಣಗಳು, ಅಂತರಿಕ್ಷ ಮತ್ತು ರಕ್ಷಣಾ ಉಪಕರಣಗಳು, ವೈದ್ಯಕೀಯ ಉಪಕರಣಗಳು, ವಿದ್ಯುತ್ ಉಪಕರಣಗಳು ಸೇರಿದಂತೆ ವಿವಿಧ ಯಂತ್ರಗಳ ತಯಾರಿಕಾ ಸಂಸ್ಥೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದರು.

‘ವಸ್ತು ಪ್ರದರ್ಶನದ ಪ್ರತಿ ಆವೃತ್ತಿಯಲ್ಲಿ ರಾಜ್ಯದ ವಿವಿಧ ತಾಂತ್ರಿಕ ಕಾಲೇಜುಗಳ ಆಯ್ದ 35 ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 30 ದಿನಗಳ ಬ್ರಿಡ್ಜ್ ಕೋರ್ಸ್ ಮೂಲಕ ಔದ್ಯೋಗಿಕ ಕೌಶಲ ತರಬೇತಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಇಂಟೆಕ್ಸ್‌ನ ನಿಕಟಪೂರ್ವ ಅಧ್ಯಕ್ಷ ಆರ್. ಶ್ರೀನಿವಾಸನ್, ಮಹಾ ನಿರ್ದೇಶಕ ಜೇಬಕ್ ದಾಸ್‌ಗು‌ಪ್ತ ಮತ್ತು ಯುಕೆನ್ ಇಂಡಿಯಾ ‍ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸಿ.ಪಿ. ರಂಗಾಚಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.