ADVERTISEMENT

ಐಪಿಎಲ್‌ ಬೆಟ್ಟಿಂಗ್ ದಂಧೆ: ನಾಗರಿಕರಿಗೆ ಪೊಲೀಸ್ ಕಮಿಷನರ್ ಬಿ.ದಯಾನಂದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 15:40 IST
Last Updated 6 ಏಪ್ರಿಲ್ 2025, 15:40 IST
<div class="paragraphs"><p>ಪೊಲೀಸ್ ಕಮಿಷನರ್ ಬಿ.ದಯಾನಂದ </p></div>

ಪೊಲೀಸ್ ಕಮಿಷನರ್ ಬಿ.ದಯಾನಂದ

   

ಬೆಂಗಳೂರು: ‌ಐಪಿಎಲ್‌ ಪಂದ್ಯಗಳ ಬೆಟ್ಟಿಂಗ್ ಸೋಗಿನಲ್ಲಿ ವಂಚನೆ ಕೃತ್ಯಗಳು ಹೆಚ್ಚಾಗಿದ್ದು, ಈ ಬಗ್ಗೆ ಎಚ್ಚರದಿಂದ ಇರುವಂತೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.

ಐಪಿಎಲ್ ಪಂದ್ಯಗಳ ಸೋಗಿನಲ್ಲಿ ಬುಕ್ಕಿಗಳು ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿದ್ದಾರೆ. ಆನ್​ಲೈನ್ ಮೂಲಕ ಲಿಂಕ್‌ಗಳನ್ನು ಕಳುಹಿಸಿ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಕಾನೂನುಬಾಹಿರ ಆ್ಯಪ್ ಕಂಪನಿಗಳು ಬೆಟ್ಟಿಂಗ್​ನಲ್ಲಿ ಗೆದ್ದರೆ ಹೆಚ್ಚು ಹಣ ಗಳಿಸುವ ಆಮಿಷವೊಡ್ಡಿ ವಂಚನೆ ಕೃತ್ಯದಲ್ಲಿ ಭಾಗಿಯಾಗುತ್ತಿವೆ ಎಂದು ತಿಳಿಸಿದ್ದಾರೆ.

ADVERTISEMENT

ಬೆಟ್ಟಿಂಗ್ ಪ್ರೋತ್ಸಾಹಿಸುವ ವಾಟ್ಸ್‌ಆ್ಯಪ್ ಗ್ರೂಪ್​ಗಳಿಗೆ ಸದಸ್ಯರಾಗದಿರಿ. ಅಪರಿಚಿತ ವ್ಯಕ್ತಿಗಳಿಗೆ ವೈಯಕ್ತಿಕ ವಿವರ ನೀಡಬಾರದು. ಆನ್‌ಲೈನ್ ಬೆಟ್ಟಿಂಗ್ ಕಾನೂನುಬಾಹಿರ ಹಾಗೂ ಅಪಾಯಕಾರಿ. ವಂಚನೆಯ ಬಲೆಯಲ್ಲಿ ಸಿಲುಕಬೇಡಿ. 1930ಕ್ಕೆ ಕರೆ ಮಾಡಿ ಬೆಟ್ಟಿಂಗ್ ಬಗ್ಗೆ ಮಾಹಿತಿ ನೀಡಬೇಕು ಎಂದು ನಗರ ಪೊಲೀಸ್​ ಇಲಾಖೆ ಜಾಲತಾಣದಲ್ಲಿ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.