ADVERTISEMENT

ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮೇ 2025, 16:15 IST
Last Updated 3 ಮೇ 2025, 16:15 IST
ಆರೋಪಿಗಳಿಂದ ವಶಪಡಿಸಿಕೊಂಡಿರುವ ಐಪಿಎಲ್ ಟಿಕೆಟ್,  ಮೊಬೈಲ್ ಮತ್ತು ನಗದು. 
ಆರೋಪಿಗಳಿಂದ ವಶಪಡಿಸಿಕೊಂಡಿರುವ ಐಪಿಎಲ್ ಟಿಕೆಟ್,  ಮೊಬೈಲ್ ಮತ್ತು ನಗದು.    

ಬೆಂಗಳೂರು: ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಐಪಿಎಲ್‌ ಕ್ರಿಕೆಟ್ ಪಂದ್ಯಗಳ ಟಿಕೆಟ್ ಮಾರುತ್ತಿದ್ದ ನಾಲ್ಕು ಮಂದಿಯನ್ನು ಸಿಸಿಬಿ ಪೊಲೀಸರು (ವಿಶೇಷ ತನಿಖಾ ತಂಡ) ಬಂಧಿಸಿದ್ದಾರೆ.

ನಗರದ ಚರಣ್ ರಾಜ್, ಹರ್ಷವರ್ಧನ, ವಿನಯ್ ಮತ್ತು ವೆಂಕಟಸಾಯಿ ಕಿರಣ್ ಅವರನ್ನು ಬಂಧಿಸಿ, ₹38,400 ಮೌಲ್ಯದ 32 ಐಪಿಎಲ್ ಟಿಕೆಟ್‌ಗಳು, ನಾಲ್ಕು ಮೊಬೈಲ್ ಮತ್ತು ಒಂದು ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. 

ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ‌

ADVERTISEMENT

ಖಚಿತ ಮಾಹಿತಿ ಆಧರಿಸಿದ ಪೊಲೀಸರ ತಂಡ, ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್‌ಲೈನ್‌ ರಸ್ತೆಯಲ್ಲಿ ಟಿಕೆಟ್ ಮಾರಾಟದಲ್ಲಿ ತೊಡಗಿದ್ದ ಆರೋಪಿ ಚರಣ್‌ ರಾಜ್ ಅವರನ್ನು ವಶಕ್ಕೆ ಪಡೆದು, ₹ 1,200 ಮುಖಬಲೆಯ 12 ಟಿಕೆಟ್ ಮತ್ತು ಮೊಬೈಲ್ ವಶಕ್ಕೆ ಪಡಿಸಿಕೊಂಡು ವಿಚಾರಣೆ ನಡೆಸಿತು.

ಬಳಿಕ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಅವರಿಂದ 20 ಐಪಿಎಲ್ ಟಿಕೆಟ್‌ಗಳು, ನಾಲ್ಕು ಮೊಬೈಲ್ ಮತ್ತು ಒಂದು ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವನ್ನು ಸಿಸಿಬಿ ವಿಶೇಷ ವಿಚಾರಣಾ ದಳಕ್ಕೆ ವರ್ಗಾವಣೆಯಾಗಿದ್ದು, ತನಿಖೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.