ADVERTISEMENT

ತಪ್ಪು ತಿದ್ದಿ ನಡೆದರೆ ದೇಶಕ್ಕೆ ಒಳಿತು: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 16:02 IST
Last Updated 9 ಮೇ 2025, 16:02 IST
<div class="paragraphs"><p>ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ&nbsp; ಬುದ್ಧ, ಬಸವಣ್ಣ, ಬಾಬು ಜಗಜೀವನರಾಮ್, ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಟಿ. ಪುತ್ರ, ಮಹೇಶ ಬಿ. ಶಿರೂರ,&nbsp; ಎನ್. ಚಲುವರಾಯಸ್ವಾಮಿ, ವೈ.ಎಸ್. ಪಾಟೀಲ, ಬಿ. ವೈ. ಶ್ರೀನಿವಾಸ ಅವರು ಸಂವಿಧಾನ ಪೀಠಿಕೆ ಓದಿದರು </p></div>

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ  ಬುದ್ಧ, ಬಸವಣ್ಣ, ಬಾಬು ಜಗಜೀವನರಾಮ್, ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಟಿ. ಪುತ್ರ, ಮಹೇಶ ಬಿ. ಶಿರೂರ,  ಎನ್. ಚಲುವರಾಯಸ್ವಾಮಿ, ವೈ.ಎಸ್. ಪಾಟೀಲ, ಬಿ. ವೈ. ಶ್ರೀನಿವಾಸ ಅವರು ಸಂವಿಧಾನ ಪೀಠಿಕೆ ಓದಿದರು

   

– ಪ್ರಜಾವಾಣಿ ಚಿತ್ರ. 

ಬೆಂಗಳೂರು: ದ್ವೇಷ, ಸ್ವಾರ್ಥ, ಅಸೂಯೆಯಿಂದ ದೇಶದಲ್ಲಿ ಅನೇಕ ಸಮಸ್ಯೆಗಳು ಉದ್ಬವಿಸುತ್ತಿವೆ. ಜನರು ತಮ್ಮ ತಪ್ಪುಗಳನ್ನು ತಿದ್ದಿ ನಡೆದರೆ ದೇಶಕ್ಕೆ ಒಳಿತು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ADVERTISEMENT

ನಗರದಲ್ಲಿ ಶುಕ್ರವಾರ ಕೃಷಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕೃಷಿ ಪದವೀಧರ ಅಧಿಕಾರಿಗಳ ಸಂಘ ಆಯೋಜಿಸಿದ್ದ ಬುದ್ಧ, ಬಸವಣ್ಣ, ಬಾಬು ಜಗಜೀವನರಾಮ್, ಬಿ.ಆರ್.ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಹೇಳಿದಂತೆ ಇತಿಹಾಸ ಗೊತ್ತಿಲ್ಲದವರು, ಇತಿಹಾಸ ಬರೆಯಲು ಸಾಧ್ಯವಿಲ್ಲ. ಅಂಬೇಡ್ಕರ್, ಬಸವಣ್ಣ, ಬಾಬು ಜಗಜೀವನರಾಮ್‌, ಅಂಬೇಡ್ಕರ್ ಅವರು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಮಹನೀಯರ ಸಂದೇಶ, ಆಚಾರ, ವಿಚಾರಗಳನ್ನು ತಿಳಿದು ಸಾಗಬೇಕು ಎಂದು ಕರೆ ನೀಡಿದರು.

ಬಾಬು ಜಗಜೀವನರಾಮ್ ಅವರು ದೇಶದ ಉಪ ಪ್ರಧಾನಿಯಾಗಿದ್ದರು. ಕೃಷಿ ಸಚಿವರಾಗಿ ಹೊಸ ತಂತ್ರಜ್ಞಾನ ತಂದು ಹಸಿರು ಕ್ರಾಂತಿ ಸೃಷ್ಟಿಸಿದರು. ಅವರ ಶ್ರಮದ ಫಲವಾಗಿ ಹಸಿವಿನ ಸಮಸ್ಯೆ ನೀಗಿದೆ. ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಸಂವಿಧಾನ ಕೊಟ್ಟಿರುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ತಿರುಮಲೇಶ ಅಧ್ಯಕ್ಷತೆ ವಹಿಸಿದ್ದರು. ‌ಸಾಹಿತಿ ಹುಲಿಕುಂಟೆ ಮೂರ್ತಿ ಹಾಗೂ ಜಾನಪದ ಕಲಾವಿದೆ ಮಂಜುಳಾ ಆಲದಹಳ್ಳಿ ಅವರನ್ನು ಸನ್ಮಾನಿಸಲಾಯಿತು. 

ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಜಿ.ಟಿ.ಪುತ್ರ, ಕೃಷಿ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ವೈ.ಶ್ರೀನಿವಾಸ್, ನಿವೃತ್ತ ಹೆಚ್ಚುವರಿ ನಿರ್ದೇಶಕ ಬಿ.ಶಿವರಾಜು, ನಿವೃತ್ತ ಸಹಾಯಕ ನಿರ್ದೇಶಕ ಡಿ.ಶಿವಶಂಕರ್ ಹಾಜರಿದ್ದರು.

ಇದೇ ವೇಳೆ ಹವ್ಯಾಸಿ ಕೃಷಿ ರಂಗ ತಂಡದಿಂದ ಬುದ್ಧ, ಬಸವ, ಅಂಬೇಡ್ಕರ್‌ ಕುರಿತು ಕಿರುನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.