ADVERTISEMENT

ಜಾನಪದ ಅಕಾಡೆಮಿ: ಫೆಲೋಶಿಪ್‌ಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:34 IST
Last Updated 6 ಜನವರಿ 2026, 16:34 IST
   

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯು ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಫೆಲೋಶಿ‍ಪ್‌ಗೆ ಅರ್ಜಿ ಆಹ್ವಾನಿಸಿದೆ. 

ಆಯ್ಕೆಯಾದವರು ಐದು ತಿಂಗಳ ಒಳಗೆ ಅಧ್ಯಯನ ಪೂರ್ಣಗೊಳಿಸಬೇಕು. ಪ್ರತಿ ಸಂಶೋಧಕ ಅಥವಾ ಅಧ್ಯಯನಕಾರರಿಗೆ ₹70 ಸಾವಿರ ಹಾಗೂ ಮಾರ್ಗದರ್ಶಕರಿಗೆ ₹5 ಸಾವಿರ ನೀಡಲಾಗುತ್ತದೆ.

ಫೆಲೋಶಿಪ್‌‌ಗೆ ಸಾಮಾನ್ಯ ಯೋಜನೆಯಡಿ ಒಬ್ಬರು, ಪರಿಶಿಷ್ಟ ಜಾತಿಯಡಿ ಐವರು ಮತ್ತು ಪರಿಶಿಷ್ಟ ಪಂಗಡದಡಿ ಒಂಬತ್ತು ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ನಮೂನೆ, ಫೆಲೋಶಿಪ್ ಶೀರ್ಷಿಕೆಗಳು ಮತ್ತು ಇದಕ್ಕೆ ಸಂಬಂಧಿಸಿದ ವಿವರಗಳು ಅಕಾಡೆಮಿ ವೆಬ್‌‌ಸೈಟ್‌ https://janapada.karnataka.gov.in/ ನಲ್ಲಿ ಲಭ್ಯ.   

ADVERTISEMENT

ಅರ್ಹ ಅಭ್ಯರ್ಥಿಗಳು ಇದೇ 23ರೊಳಗೆ ರಿಜಿಸ್ಟ್ರಾರ್‌‌, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು– 560002ಕ್ಕೆ ಕಳುಹಿಸಬೇಕು. ಸಂದರ್ಶನದ ಮುಖೇನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.