ಬೆಂಗಳೂರು: ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ಆಯೋಜಿಸಿರುವ ದಕ್ಷಿಣ ಭಾರತದ ಅತಿದೊಡ್ಡ ಆಭರಣ ಮತ್ತು ಮದುವೆ, ವಿಶೇಷ ಜೀವನ ಕುರಿತ ‘ಜೀತೋ ಜೇವರ್ ಎಕ್ಸ್ ಪೋ ಆ್ಯಂಡ್ ಬ್ರೈಡಲ್ ಸ್ಟೋರಿ’ ಪ್ರದರ್ಶನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು.
‘ಇಂತಹ ಕಾರ್ಯಕ್ರಮಗಳು ರಾಜ್ಯದ ಆರ್ಥಿಕ ಮತ್ತು ಸಾಂಸ್ಕೃತಿಕ ಸಮೃದ್ಧಿಗೆ ಹೊಸ ದಿಕ್ಕನ್ನು ನೀಡುತ್ತವೆ. ಈ ಕಾರ್ಯಕ್ರಮವನ್ನು ವ್ಯಾಪಾರ ಮತ್ತು ಸಂಸ್ಕೃತಿಯ ಅನನ್ಯ ಸಂಯೋಜನೆ ಎಂದು ಪರಿಗಣಿಸಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಜೀತೋ ಅವರ ಪಾತ್ರ ಪ್ರಶಂಸನೀಯ. ವ್ಯಾಪಾರ ಜಗತ್ತಿಗೆ ಇದು ಪ್ರೇರಣಾದಾಯಕ ವೇದಿಕೆ’ ಎಂದು ಶಿವಕುಮಾರ್ ಹೇಳಿದರು.
ಸಂಸದ ಪಿ.ಸಿ. ಮೋಹನ್ ಮಾತನಾಡಿ, ‘ಈ ಪ್ರದರ್ಶನವು ಉದ್ಯಮಶೀಲತೆ ಮತ್ತು ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತಿದೆ’ ಎಂದು ಶ್ಲಾಘಿಸಿದರು.
ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ‘ಕರ್ನಾಟಕದ ವಾಣಿಜ್ಯ ಚಟುವಟಿಕೆಗಳಿಗೆ ಹೊಸ ಶಕ್ತಿ ತಂದಿದೆ. ಜೈನ ಸಮುದಾಯದ ಹೆಮ್ಮೆಯ ಪರಂಪರೆಯೊಂದಕ್ಕೆ ಇದು ಸೇರ್ಪಡೆಯಾಗಿದೆ’ ಎಂದರು.
‘ಈ ಭವ್ಯ ಕಾರ್ಯಕ್ರಮದ ಹಿಂದೆ ಜೀತೋ ಸದಸ್ಯರ ಶಕ್ತಿ ಮತ್ತು ಮಾರ್ಗದರ್ಶನ’ ಇದೆ ಎಂದು ಜೀತೋ ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷ ವಿಮಲ್ ಕಟಾರಿಯಾ ಹೇಳಿದರು.
‘ಜ್ಯುವೆಲರಿ ಮತ್ತು ಉಡುಪುಗಳು ನಮ್ಮ ಸಂಸ್ಕೃತಿಯ ಅದ್ಭುತ ಅಂಶಗಳಾಗಿವೆ. ಎರಡನ್ನೂ ಒಂದೆಡೆ ತಂದು, ಔಪಚಾರಿಕ ಮಟ್ಟದ ಜ್ಯುವೆಲರಿ ಮತ್ತು ಉಡುಪುಗಳ ಆಯ್ಕೆಯಲ್ಲಿನ ಸಂಕಷ್ಟವನ್ನು ದೂರ ಮಾಡಬೇಕೆಂಬುದು ನಮ್ಮ ಮುಖ್ಯ ಉದ್ದೇಶ’ ಎಂದು ಜ್ವೆರ್ ಎಕ್ಸ್‌ಪೋ ಸಂಯೋಜಕ ಸುರೇಶ್ ಗಾಂನಾ ಮತ್ತು ಬ್ರೈಡಲ್ ಸ್ಟೋರಿ ಸಂಯೋಜಕಿ ಸುಮನ್ ಸಿಂಘ್ವಿ ತಿಳಿಸಿದರು.
ಜೀತೋ ಅಪೆಕ್ಸ್ ಚೇರ್ಮನ್ ಪೃಥ್ವಿರಾಜ್ ಕೊಠಾರಿ ಅವರು ‘ಮಹಿಳೆಯರು ತಮ್ಮ ಉಳಿತಾಯವನ್ನು ಚಿನ್ನ ಖರೀದಿ ಮೂಲಕ, ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸಿದ್ದಾರೆ’ ಎಂದರು.
ಮಾಜಿ ಚೇರ್ಮನ್ ತೇಜರಾಜ್ ಗುಲೆಚ್ಚಾ ‘ಸಾಮಾನ್ಯರ ಯೋಜನೆಗಳಲ್ಲಿ ಹೆಚ್ಚು ಪ್ರಾವೀಣ್ಯದ ಅಗತ್ಯವಿದ’ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಬಫ್ಫನಾ, ಕೆಕೆಜಿ ಜೋನ್ ಅಧ್ಯಕ್ಷ ಪ್ರವೀಣ್ ಬಫ್ಫನಾ, ಅಪೆಕ್ಸ್ ಶ್ರಮಣ್ ಆರೋಗ್ಯಂ ಅಧ್ಯಕ್ಷ ರಮೇಶ್ ಹರಣ್, ಜೀತೋ ಅಪೆಕ್ಸ್ ಅಧ್ಯಕ್ಷ ವಿಜಯ್ ಭಂಡಾರಿ, ಮಹಿಳಾ ಘಟಕದ ಅಧ್ಯಕ್ಷರಾದ ಶೀತಲ್ ದುಗ್ಗಡ್, ಡೈರೆಕ್ಟರ್ ಇನ್–ಚಾರ್ಜ್ ಸೋನಾಲಿ ದುಗ್ಗಡ್, ಅಪೆಕ್ಸ್ ಕಾರ್ಯದರ್ಶಿ ಲಲಿತ್ ಡಾಂಗಿ ಅವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.