ADVERTISEMENT

ಪತ್ರಕರ್ತರಿಗೆ ಕೋವಿಡ್‌ ವಿಮೆ: ಬಿ.ಎಸ್‌.ಯಡಿಯೂರಪ್ಪ

₹ 30 ಲಕ್ಷದ ವಿಮಾ ಪರಿಹಾರ–ಟಿಪ್ಪಣಿ ರವಾನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 21:36 IST
Last Updated 3 ಜುಲೈ 2020, 21:36 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಕೊರೊನಾ ಸೋಂಕು ಲೆಕ್ಕಿಸದೇ, ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸೇನಾನಿಗಳಂತೆ ಕೆಲಸ ಮಾಡುತ್ತಿರುವಪತ್ರಕರ್ತರಿಗೂ ವಿಮಾ ಪರಿಹಾರ ಯೋಜನೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪೊಲೀಸರು, ಆಶಾ ಕಾರ್ಯಕರ್ತೆಯರ ಸಹಿತ ಕೊರೊನಾ ಸೇನಾನಿಗಳಿಗೆ ಒದಗಿಸಲಾಗಿರುವ ₹ 30 ಲಕ್ಷದ ವಿಮಾ ಪರಿಹಾರ ಪ್ಯಾಕೇಜ್‌ ಅನ್ನು ಪತ್ರಕರ್ತರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಎಡಿಟರ್ಸ್ ಗಿಲ್ಡ್‌ನ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಶುಕ್ರವಾರ ಇಲ್ಲಿ ಭೇಟಿ ಮಾಡಿದ ಪತ್ರಕರ್ತರ ನಿಯೋಗ, ವಿಮಾ ಪ್ಯಾಕೇಜ್‌ಗೆ ಪತ್ರಕರ್ತರನ್ನು ಸೇರಿಸುವಂತೆ ಮನವಿ ಮಾಡಿತು.

ADVERTISEMENT

ಪರಿಹಾರ: ಇತ್ತೀಚೆಗೆ ಮೃತಪಟ್ಟ ‘ವಿಜಯ‌ಕರ್ನಾಟಕ’ದ ಗೌರಿಪುರ ಚಂದ್ರು ಮತ್ತು ‘ಪ್ರಜಾವಾಣಿ’ಯ ಬೇಲೂರು ವರದಿಗಾರ ಬಿ.ಎಂ.ರವೀಶ್ ಕುಟುಂಬಕ್ಕೆ ಮುಖ್ಯಮಂತ್ರಿ ತಲಾ ₹ 5 ಲಕ್ಷ ಪರಿಹಾರ ಮಂಜೂರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.