ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿ ಮೈಸೂರಿನ ಕಾ.ತ. ಚಿಕ್ಕಣ್ಣ ನೇಮಕವಾಗಿದ್ದಾರೆ.
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ಸದಸ್ಯರಾಗಿ ಕಲಬುರಗಿಯ ಮೀನಾಕ್ಷಿ ಬಾಳಿ, ಬೆಂಗಳೂರು ಗ್ರಾಮಾಂತರದ ಎಚ್. ದಂಡಪ್ಪ, ಉಡುಪಿಯ ಕಾತ್ಯಾಯಿನಿ ಕುಂಜಿಬೆಟ್ಟು, ರಾಮನಗರದ ಚಕ್ಕೆರೆ ಶಿವಶಂಕರ್, ಉಡುಪಿಯ ಸಂವರ್ತ ಸಾಹಿಲ್ ಹಾಗೂ ರಾಯಚೂರಿನ ದಸ್ತಗೀರ್‌ಸಾಬ್ ದಿನ್ನಿ ನೇಮಕರಾಗಿದ್ದಾರೆ.
ಈ ನೇಮಕಾತಿ ಮುಂದಿನ ಆದೇಶದವರೆಗೆ ಅಥವಾ ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.