ADVERTISEMENT

ಕಳಿಂಗ ಇನ್‌ಸ್ಟಿಟ್ಯೂಟ್‌ಗೆ ಲೀಡರ್‌ಶಿಪ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 19:38 IST
Last Updated 19 ಫೆಬ್ರುವರಿ 2019, 19:38 IST
ಕಳಿಂಗ ಇನ್‌ಸ್ಟಿಟ್ಯೂಟ್‌ನ ಅಚ್ಯುತ್ ಸಮಂತ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಸಚಿವ ಜೋಯೆಲ್‌ ಓರಮ್, ನಂದ್ ಕುಮಾರ್ ಸಾಯ್ ಇದ್ದರು
ಕಳಿಂಗ ಇನ್‌ಸ್ಟಿಟ್ಯೂಟ್‌ನ ಅಚ್ಯುತ್ ಸಮಂತ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಸಚಿವ ಜೋಯೆಲ್‌ ಓರಮ್, ನಂದ್ ಕುಮಾರ್ ಸಾಯ್ ಇದ್ದರು   

ಬೆಂಗಳೂರು: ಬುಡಕಟ್ಟು ಜನರ ಉನ್ನತಿಗಾಗಿ ಶ್ರಮಿಸುತ್ತಿರುವ ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್ ಸೋಷಿಯಲ್‌ ಸೈನ್ಸಸ್‌ (ಕೆಐಎಸ್‌ಎಸ್‌) ಸಂಸ್ಥೆಗೆರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನೀಡುವ ಲೀಡರ್‌ಶಿಪ್‌ ಪ್ರಶಸ್ತಿ ದೊರೆತಿದೆ.

ಮಂಗಳವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರುಸಂಸ್ಥೆಯ ಸ್ಥಾಪಕ ಅಚ್ಯುತ್‌ ಸಮಂತ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆಕೇಂದ್ರ ಬುಡಕಟ್ಟು ಸಚಿವಜೋಯೆಲ್‌ ಓರಮ್, ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷನಂದ್ ಕುಮಾರ್ ಸಾಯ್ ಇದ್ದರು.

ಈ ಪ್ರಶಸ್ತಿ ಪಡೆದ ಮೊದಲ ಸಂಸ್ಥೆ ಕೆಐಎಸ್‌ಎಸ್‌. ದೇಶದ ಬೇರೆ ಬೇರೆ ಕಡೆಬುಡಕಟ್ಟು ಜನರ ಉನ್ನತಿಗಾಗಿ ಶಾಲಾ–ಕಾಲೇಜುಗಳನ್ನು ಸ್ಥಾಪಿಸಿ ಉಚಿತ ಶಿಕ್ಷಣ ನೀಡುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.