ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು: ಸಾಹಿತ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಸೌಜನ್ಯಾ, ಕೀರ್ತನಾ, ಇಸ್ಮಾಯಿಲ್ ಸಾಬ್‌ಗೆ ಮೊದಲ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:23 IST
Last Updated 17 ಮೇ 2025, 15:23 IST
.
.   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 2024–25ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದೆ. 

ಫೆ.7ರಿಂದ ಫೆ.9ರವರೆಗೆ ರಾಜ್ಯದಾದ್ಯಂತ 18 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಯನ್ನು ಒಟ್ಟು 1,534 ಅಭ್ಯರ್ಥಿಗಳು ಎದುರಿಸಿದ್ದರು. ‘ಕನ್ನಡ ಪ್ರವೇಶ’ ಪರೀಕ್ಷೆಗೆ ಹಾಜರಾಗಿದ್ದ 536 ಅಭ್ಯರ್ಥಿಗಳಲ್ಲಿ 457 ಮಂದಿ (ಶೇ 85.26) ತೇರ್ಗಡೆಯಾಗಿದ್ದಾರೆ. ಸೌಜನ್ಯಾ ಅನಿಲಕುಮಾರ ಗುಣದಾಳ ಅವರು 185 ಅಂಕ ಪಡೆಯುವುದರೊಂದಿಗೆ ಮೊದಲ ರ್‍ಯಾಂಕ್ ಪಡೆದಿದ್ದಾರೆ.  

‘ಕನ್ನಡ ಕಾವ’ ಪರೀಕ್ಷೆ ಬರೆದ 655 ಅಭ್ಯರ್ಥಿಗಳಲ್ಲಿ 519 ಮಂದಿ (ಶೇ 79.24) ಉತ್ತೀರ್ಣರಾಗಿದ್ದಾರೆ. ಕೀರ್ತನಾ ಎಂ. (167) ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ‘ಕನ್ನಡ ಜಾಣ’ ಪರೀಕ್ಷೆಯನ್ನು 37 ಅಭ್ಯರ್ಥಿಗಳು ಬರೆದಿದ್ದು, 29 ಮಂದಿ (ಶೇ 78.38) ತೇರ್ಗಡೆಯಾಗಿದ್ದಾರೆ. ಶ್ರೀನಿವಾಸ ಕೆ. (372) ಮೊದಲ ರ್‍ಯಾಂಕ್ ಪಡೆದಿದ್ದಾರೆ.

ADVERTISEMENT

‘ಕನ್ನಡ ರತ್ನ’ ಪರೀಕ್ಷೆಗೆ 62 ಅಭ್ಯರ್ಥಿಗಳು ಹಾಜರಾಗಿದ್ದು, 44 ಮಂದಿ (ಶೇ 70.97) ಉತ್ತೀರ್ಣರಾಗಿದ್ದಾರೆ. ಇಸ್ಮಾಯಿಲ್ ಸಾಬ್ ಐರಣಿ ಅವರು 389 ಅಂಕಗಳೊಂದಿಗೆ ಮೊದಲ ರ್‍ಯಾಂಕ್ ಗಳಿಸಿದ್ದಾರೆ. ಫಲಿತಾಂಶವನ್ನು ಪರಿಷತ್ತಿನ ಅಂತರ್ಜಾಲ ತಾಣ www.kasapa.in ಮೂಲಕ ಪಡೆದುಕೊಳ್ಳಬಹುದು ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.