ADVERTISEMENT

ದಂತಭಾಗ್ಯ: ದಂತಪಂಕ್ತಿ ದರ ₹3000ಕ್ಕೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 18:59 IST
Last Updated 28 ಜುಲೈ 2025, 18:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಉಚಿತವಾಗಿ ದಂತಪಂಕ್ತಿ ನೀಡುವ ದಂತಭಾಗ್ಯ ಯೋಜನೆಯಡಿ ನೀಡುವ ವೆಚ್ಚವನ್ನು ₹2000 ದಿಂದ

ADVERTISEMENT

₹ 3000ಕ್ಕೆ ಹೆಚ್ಚಳ ಮಾಡಲಾಗಿದೆ.

ದಂತಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ವಯೋಮಿತಿಯನ್ನು 60 ವರ್ಷದ ಬದಲು 45 ವರ್ಷಕ್ಕೆ ಇಳಿಸಲಾಗಿದೆ. ಭಾಗಶಃ ದಂತಪಂಕ್ತಿ ಮಾಡಿದರೆ ₹1000, ಸಂಪೂರ್ಣ ದಂತಪಂಕ್ತಿ ಮಾಡಿದರೆ ₹ 2000 ಅನ್ನು ಸರ್ಕಾರವು ಆಯಾ ಆಸ್ಪತ್ರೆ, ದಂತ ವೈದ್ಯಕೀಯ ಕಾಲೇಜುಗಳಿಗೆ ನೀಡುತ್ತಿತ್ತು.

ದಂತ ಪಂಕ್ತಿಗಳನ್ನು ತಯಾರಿಸುವ ಸಾಮಗ್ರಿಗಳ ವೆಚ್ಚ, ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಪರಿಷ್ಕರಣೆ ಮಾಡಲು ಆರೋಗ್ಯ ಇಲಾಖೆ ಕೋರಿತ್ತು. ಅದರಂತೆ ದಂತಪಂಕ್ತಿ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಹೆಚ್ಚುವರಿ ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ಇಲಾಖೆಗೆ ಒದಗಿಸಲಾದ ಆಯವ್ಯಯದಲ್ಲಿ ಭರಿಸುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.