
ದಿನೇಶ್ ಗುಂಡೂರಾವ್
ಬೆಂಗಳೂರು: ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಷಯ ಪರೀಕ್ಷಾ ಯಂತ್ರಕ್ಕೆ (ಸಿಬಿಎನ್‌ಎಎಟಿ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಸಿಂಜೆಂಟ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಲ್ಲಿ ₹ 1.5 ಕೋಟಿ ಮೊತ್ತದಲ್ಲಿ 7 ಯಂತ್ರಗಳನ್ನು ನೀಡಿದೆ. 3 ಯಂತ್ರಗಳನ್ನು ವಿಜಯನಗರ ಜಿಲ್ಲೆಗೆ, 3 ಯಂತ್ರಗಳನ್ನು ಕೋಲಾರ ಜಿಲ್ಲೆಗೆ ನೀಡಲಾಗಿದ್ದು, ಒಂದನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
‘ನಿಖರ ಫಲಿತಾಂಶ ನೀಡುವ ಈ ಯಂತ್ರಗಳಿಂದ ಕ್ಷಯ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಸಾಧ್ಯ. ಮೈಕ್ರೋಸ್ಕೋಪಿಕ್ ಪರೀಕ್ಷೆಯಲ್ಲಿ ಕೆಲವೊಮ್ಮೆ ಆರಂಭಿಕ ಹಂತದಲ್ಲಿ ರೊಗ ಪತ್ತೆ ಸಾಧ್ಯವಾಗದೆ ರೋಗಿಗೆ ಸಮಸ್ಯೆ ಆಗುತ್ತಿತ್ತು. ಈ ವಿಧಾನದಲ್ಲಿ 10,000 ಎಂಎಲ್ ಬೆಸಿಲಿಯನ್ ಇದ್ದರೆ ಮಾತ್ರ ರೋಗವನ್ನು ಗುರುತಿಸಬಹುದು. ಅದಕ್ಕೂ ಕಡಿಮೆ ಇದ್ದಾಗ ಗುರುತಿಸುವುದು ಕಷ್ಟ ಆಗುತ್ತಿತ್ತು. ಸಿಬಿಎನ್ಎಎಟಿಯಲ್ಲಿ 137ಎಂಎಲ್ ಇದ್ದಾಗಲೂ ಪತ್ತೆ ಹಚ್ಚಬಹುದಾಗಿದೆ. ಕೇವಲ 90 ನಿಮಿಷದಲ್ಲಿ ಕ್ಷಯ ರೋಗಾಣು ಪತ್ತೆ ಹಚ್ಚಲು ಸಾಧ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.