ADVERTISEMENT

ಬೆಂಗಳೂರಿನಿಂದ 75 ವಿಮಾನಗಳ ಹಾರಾಟ

​ಪ್ರಜಾವಾಣಿ ವಾರ್ತೆ
Published 27 ಮೇ 2020, 2:47 IST
Last Updated 27 ಮೇ 2020, 2:47 IST
ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಂದಿಳಿದ ಪ್ರಯಾಣಿಕರು ಕ್ವಾರಂಟೈನ್‌ ಸ್ಥಳದತ್ತ ತೆರಳಿದರು ಪ್ರಜಾವಾಣಿ ಚಿತ್ರ 
ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಂದಿಳಿದ ಪ್ರಯಾಣಿಕರು ಕ್ವಾರಂಟೈನ್‌ ಸ್ಥಳದತ್ತ ತೆರಳಿದರು ಪ್ರಜಾವಾಣಿ ಚಿತ್ರ    

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಕ ಮಂಗಳವಾರ75 ವಿಮಾನಗಳು ಸಂಚಾರ ನಡೆಸಿದವು.

ಇಂಡಿಗೊ, ಏರ್‌ ಇಂಡಿಯಾ ಸೇರಿದಂತೆ ಕೆಲವು ವಿಮಾನಯಾನ ಸಂಸ್ಥೆಗಳ ವಿಮಾನಗಳು ಕಾರ್ಯಾಚರಣೆ ನಡೆಸಿದವು. ಮಂಗಳವಾರ ಸಂಜೆಯವರೆಗೆ ನಗರದಿಂದ 35 ವಿಮಾನಗಳು ಬೇರೆ ರಾಜ್ಯಗಳಿಗೆ ತೆರಳಿದವು. ಬೇರೆ ರಾಜ್ಯ ಮತ್ತು ನಗರಗಳಿಂದ 40 ವಿಮಾನಗಳು ಕೆಐಎಗೆ ಬಂದಿಳಿದವು. ಇವುಗಳಲ್ಲಿ ಸುಮಾರು700ಕ್ಕೂ ಹೆಚ್ಚು ಪ್ರಯಾಣಿಕರು ಬಂದಿಳಿದಿದ್ದು, ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಂಗಳವಾರ ಕೂಡ ಕೆಐಎದಿಂದ 32 ವಿಮಾನಗಳ ಸಂಚಾರ ಕಾರಣಾಂತರಗಳಿಂದ ರದ್ದಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.